ತಿರುಪತಿ ತಿಮ್ಮಪ್ಪನ ಬಗ್ಗೆ ತಿಳಿಯಬೇಕಾದ 10 ಆಸಕ್ತಿಕರ ವಿಚಾರಗಳಿವು

By Raghavendra M Y
Jul 06, 2024

Hindustan Times
Kannada

ದಕ್ಷಿಣ ಭಾರತ ಅತ್ಯಂತ ಪ್ರಸಿದ್ದ ದೇವಾಲಯ ತಿರುಪತಿಯ ವೆಂಕಟೇಶ್ವರ ದೇವಾಲಯ ಒಂದು

ತಿರುಪತಿಯ ಬಾಲಾಜಿ ದೇವಸ್ಥಾನ ಬಹಳಷ್ಟು ರಹಸ್ಯಗಳನ್ನು ಹೊಂದಿದೆ. ಪ್ರಮುಖವಾಗಿ 10 ಆಸಕ್ತಿಕರ ವಿಷಯಗಳನ್ನ ತಿಳಿಯೋಣ

1. ತಿರುಮಲದ ವೆಂಕಟೇಶ್ವರನ ವಿಗ್ರಹ ನಿಜವಾದ ಕೂದಲನ್ನು ಹೊಂದಿದೆ. ಒಂದು ದಂತಕಥೆಯ ಪ್ರಕಾರ, ಗಾರ್ಧವನ್ ರಾಜಕುಮಾರಿ ತನ್ನ ಕೂದಲನ್ನ ಕತ್ತರಿಸಿ ದೇವರಿಗೆ ಕೊಟ್ಟಿದ್ದಾಳೆ

2. ವಿಗ್ರಹ ಹೊರಗಿನಿಂದ ಗರ್ಭಗುಡಿಯ ಮಧ್ಯದಲ್ಲಿ ನಿಂತಿರುವಂತೆ ಕಾಣುತ್ತೆ. ಆದರೆ ವಿಗ್ರಹ ಸ್ವಲ್ಪ ಗರ್ಭ ಗುಡಿಯ ಬಲಭಾಗದ ಮೂಲೆಯಲ್ಲಿದೆ

3. ದೇವರ ಮುಂದೆ ದೀಪವನ್ನು ಯಾವಾಗ ಬೆಳಗಿಸಲಾಯಿತು ಅನ್ನೋದು ಯಾರಿಗೂ ಗೊತ್ತಿಲ್ಲ. ಆದರೆ ಅದು ಎಂದಿಗೂ ಆರಿಲ್ಲ

4.ಬೆಳಗಿನ ಅಭಿಷೇಕದ ನಂತರ ವಿಗ್ರಹ ಬೆವರುತ್ತದೆ. ಬೆವರನ್ನು ರೇಷ್ಮೆ ಬಟ್ಟೆಯಿಂದ ಒರೆಸಲಾಗುತ್ತದೆ

5. ವೆಂಕಟೇಶ್ವರನ ಮುಖ್ಯ ವಿಗ್ರಹ ಜೀವಂತವಾಗಿದೆ ಎಂದು ಭಕ್ತರು ನಂಬುತ್ತಾರೆ. ವಿಗ್ರಹದ ಹಿಂಭಾಗದಲ್ಲಿ ಕಿವಿಯನ್ನು ಇಟ್ಟರೆ ಭೋರ್ಗೆರೆಯುವ ಸಾಗರದ ಶದ್ದ ಕೇಳಿಸುತ್ತೆ

6. ಬಾಲಾಜಿಗೆ ಅರ್ಪಿಸುವ ಹೂವುಗಳು, ಹಾಲು, ಬೆಣ್ಣೆ, ಪವಿತ್ರ ಎಲೆಗಳು ಯಾರಿಗೂ ತಿಳಿಯದ ಹಳ್ಳಿಯಿಂದ ಬರುತ್ತೆ. ಈ ಗ್ರಾಮ ತಿರುಮಲದಿಂದ ಸುಮಾರು 20 ಕಿಮೀ ದೂರದಲ್ಲಿದೆಯಂತೆ

7. ಅರ್ಚಕರ ಪ್ರಕಾರ, ಪ್ರತಿ ಗುರುವಾರ ದರ್ಶನದ ಸಮಯದಲ್ಲಿ ಮುಖ್ಯ ವಿಗ್ರಹವನ್ನು ಬಿಳಿ ಮರದ ಪೇಸ್ಟ್‌ನಿಂದ ಅಲಂಕರಿಸಲಾಗುತ್ತೆ. ಪೇಸ್ಟ್ ತೆಗೆದ ನಂತರ ವಿಗ್ರಹ ಮೇಲೆ ಲಕ್ಷ್ಮಿ ದೇವಿಯ ಚಿತ್ರದ ರೀತಿಯಲ್ಲಿ ಕಾಣಿಸುತ್ತೆ

8. 19ನೇ ಶತಮಾನದಲ್ಲಿ ಇಲ್ಲಿನ ರಾಜನ 12 ಮಂದಿ ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ್ದಾನೆ. ಇವರನ್ನ ಗಲ್ಲಿಗೇರಿಸಲಾಯಿತು. ಮೃತರ ದೇಹವನ್ನು ದೇವಸ್ಥಾನದ ಗೋಡೆಗಳ ಮೇಲೆ ನೇತು ಹಾಕಲಾಯಿತು. ಆಗ ದೇವರು ಕಾಣಿಸಿಕೊಂಡರಂತೆ

9. ವಿಗ್ರಹದ ಹಿಂಭಾಗವು ಯಾವಾಗಲೂ ತೇವವಾಗಿರುತ್ತದೆ. ಇದನ್ನು ಒಣಗಿಸುವುದಕ್ಕಾಗಿ ಪುರೋಹಿತರು ಕೆಲಸ ಮಾಡುತ್ತಾರೆ

10. ತಿರುಪತಿಯ ತಿಮ್ಮಪ್ಪನ ವಿಗ್ರಹ ಬಾಷ್ಪಶೀಲ ರಾಸಾಯನಿಕ ಕ್ರಿಯೆಗಳಿಗೆ ನಿರೋಧಕವಾಗಿದೆ. ವಿಗ್ರಹದ ಮೇಲೆ ಕರ್ಪೂರ ಹಚ್ಚಿದರೂ ಅದರ ಗುರುತ ಕಾಣಲ್ಲ

ಸಮೋಸಾದಿಂದ ಚಿಕನ್‌ ವಿಂಗ್ಸ್‌ವರೆಗೆ; ವೀಕೆಂಡ್‌ ಪಾರ್ಟಿಗೆ ಹೇಳಿ ಮಾಡಿಸಿದ ಸ್ನ್ಯಾಕ್ಸ್‌ಗಳು