ಈ ವರ್ಷ ವಿಜಯದಶಮಿ ಯಾವಾಗ, ಈ ದಿನದ ಮಹತ್ವವೇನು, ಇಲ್ಲಿದೆ ಮಾಹಿತಿ
By Reshma Sep 20, 2024
Hindustan Times Kannada
ಭಾರತದಲ್ಲಿ ದಸರಾ ಅಥವಾ ವಿಜಯದಶಮಿ ಆಚರಣೆಗೆ ವಿಶೇಷ ಮಹತ್ವವಿದೆ. ದೇಶದಾದ್ಯಂತ ಈ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ
ಈ ದಿನದಂದು ರಾಮನು ರಾವಣನನ್ನು ಕೊಂದು ಅನ್ಯಾಯವನ್ನು ಮಟ್ಟಹಾಕಿ ನ್ಯಾಯವನ್ನು ಎತ್ತಿ ಹಿಡಿದನು ಎಂದು ಹೇಳಲಾಗುತ್ತದೆ
ವಿಜಯದಶಮಿಯ ದಿನ ದುರ್ಗಾಮಾತೆಯು ಮಹಿಷಾಸುರನನ್ನು ಕೊಂದು ಲೋಕವನ್ನು ದುಷ್ಟರ ಕೈಯಿಂದ ರಕ್ಷಿಸಿದರು ಎಂದು ಕೂಡ ಹೇಳಲಾಗುತ್ತದೆ
ಈ ವರ್ಷ ವಿಜಯದಶಮಿ ದಿನಾಂಕದ ಬಗ್ಗೆ ನಿಮಗೆ ಗೊಂದಲ ಇದ್ದರೆ ವಿಜಯದಶಮಿ ಯಾವಾಗ, ಶುಭಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ
ಈ ವರ್ಷ ದಶಮಿ ತಿಥಿ ಅಕ್ಟೋಬರ್ 12 ರಂದು ಬೆಳಿಗ್ಗೆ 10.58ಕ್ಕೆ ಆರಂಭವಾಗುತ್ತದೆ
ಈ ತಿಥಿ ಅಕ್ಟೋಬರ್ 13ರಂದು ಬೆಳಿಗ್ಗೆ 9.08 ನಿಮಿಷದವರೆಗೆ ಇರುತ್ತದೆ. ಹಾಗಾಗಿ ಅಕ್ಟೋಬರ್ 12 ರಂದೇ ವಿಜಯದಶಮಿ ಆಚರಿಸಲಾಗುತ್ತದೆ
ಪುರಾಣಗಳ ಪ್ರಕಾರ ದಸರಾದಂದು ಶ್ರಾವಣ ನಕ್ಷತ್ರದ ಉಪಸ್ಥಿತಿಯು ಮಂಗಳಕರ ಎಂದು ಪರಿಗಣಿಸಲಾಗುತ್ತದೆ
ಶ್ರಾವಣ ನಕ್ಷತ್ರವು ಅಕ್ಟೋಬರ್ 12ರಂದು ಬೆಳಿಗ್ಗೆ 5.25ಕ್ಕೆ ಆರಂಭವಾಗಿ ಅಕ್ಟೋಬರ್ 13 ರಂದು ಬೆಳಿಗ್ಗೆ 4.27ಕ್ಕೆ ಕೊನೆಯಾಗುತ್ತದೆ
ವಿಜಯದಶಮಿಯಂದು ಮಧ್ಯಾಹ್ನ 2.02 ರಿಂದ 2.48ರವರೆಗೆ ಪೂಜೆಗೆ ಶುಭ ಸಮಯವಿದೆ. ಅಂದರೆ ಒಟ್ಟು ಅವಧಿ 46 ನಿಮಿಷಗಳು
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಭದ್ರಕಾಳಿ ದೇವಿಯ ನವರಾತ್ರಿ ಎಂಟನೇ ದಿನದ ಅಲಂಕಾರ. ಯಡೂರು, ಚಿಕ್ಕೋಡಿ