ಜುಲೈ 2 ರಂದು ಯೋಗಿನಿ ಏಕಾದಶಿ; ವಿಷ್ಣುವಿನ ಕೃಪೆಗಾಗಿ ಈ ಮಂತ್ರ ಪಠಿಸಿ

By Raghavendra M Y
Jul 01, 2024

Hindustan Times
Kannada

ಹಿಂದೂ ಧರ್ಮದಲ್ಲಿ ಏಕಾದಶಿಗೆ ಹೆಚ್ಚಿನ ಮಹತ್ವವಿದೆ. ವಿಷ್ಣುವಿನ ಆರಾಧಕರು ಈ ದಿನ ಉಪವಾಸ ಮಾಡುತ್ತಾರೆ

ಜುಲೈ 2ರ ಮಂಗಳವಾರ ಯೋಗಿನಿ ಏಕಾದಶಿ. ಪಾಪಗಳನ್ನು ನಾಶ ಮಾಡುವ ಏಕಾದಶಿ ಎಂದು ಹೇಳಲಾಗಿದೆ

ಭಗವಾನ್ ವಿಷ್ಣುವಿನ ಈ ಮಂತ್ರಗಳನ್ನು ಪಠಿಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ

ಓಂ ನಮೋ ಭಗವತೇ ವಾಸುದೇವಾಯ || ಇದರ ಅರ್ಥ ನಾನು ಭಗವಾನ್ ವಾಸುದೇವ ಅಥವಾ ವಿಷ್ಣುವಿಗೆ ನಮಸ್ಕರಿಸುತ್ತೇನೆ. ಈ ಮಂತ್ರ ಪಠಿಸುವುದರಿಂದ ಮನಸ್ಸು ಶಾಂತವಾಗಿರುತ್ತೆ

ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ ಪ್ರಣತಃ ಕ್ಲೇಶ ನಾಶಾಯ ಗೋವಿಂದಾಯ ನಮೋ ನಮಃ | ಈ ಮಂತ್ರ ಜಪಿಸುವುದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ

ಕ್ಲೇಶ ನಾಶಕ ಮಂತ್ರದ ಅರ್ಥ - ತೊಂದರೆಗಳ ನಾಶಕ. ಓ ಕೃಷ್ಣ, ವಾಸುದೇವನ ಮಗ, ನಿನ್ನನ್ನು ಸ್ಮರಿಸುವುದರಿಂದ ಎಲ್ಲಾ ರೀತಿಯ ಅಪಶ್ರುತಿ ಮತ್ತು ತೊಂದರೆಗಳು ನಾಶವಾಗುತ್ತವೆ. ಅಂತಹ ಶ್ರೀ ಗೋವಿಂದನಿಗೆ ನಮಸ್ಕರಿಸುತ್ತೇನೆ

ವಿಷ್ಣು ಗಾಯತ್ರಿ ಮಂತ್ರ -ನಾರಾಯಣ ವಿದ್ಮಹೇ ವಾಸುದೇವಯ್ಯ ಧೀಮಹಿ, ತನ್ನೋ ವಿಷ್ಣು ಪ್ರಚೋದಯಾತ್ -ಒಬ್ಬನು ದುಃಖಗಳಿಂದ ಪರಿಹಾರವನ್ನು ಪಡೆಯುತ್ತಾನೆ. ಶ್ರೀಹರಿ ಆಶೀರ್ವಾದ ಪಡೆಯುತ್ತಾನೆ

ವಿಷ್ಣು ಗಾಯಿತ್ರಿ ಮಂತ್ರದ ಅರ್ಥ - ಉನ್ನತ ಬುದ್ಧಿವಂತಿಕೆ ಒಡೆಯ, ಅಂತಹ ಶ್ರೀಹರಿ ವಾಸುದೇವ, ಸರ್ವಸ್ವವಾಗಿರುವೆ ಶ್ರೀಹರಿ ವಿಷ್ಣು, ಸರ್ವವ್ಯಾಪಿಯಾದ ಭಗವಂತ, ನನ್ನನ್ನು ನಿನ್ನ ಆಶ್ರಯದಲ್ಲಿ ತೆಗೆದುಕೊ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS