ದೇವರ ಕೋಣೆಯಲ್ಲಿ ಮಾವಿನ ಎಲೆ ಇರಿಸುವುದರ ಪ್ರಯೋಜನಗಳು  

By Reshma
May 27, 2025

Hindustan Times
Kannada

ಹಿಂದೂ ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಮಾವಿನ ಎಲೆಯನ್ನು ಶುಭ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇದನ್ನು ದೇವರ ಕೋಣೆಯಲ್ಲಿ ಇಡುವುದರಿಂದಾಗುವ ಪ್ರಯೋಜನ ತಿಳಿಯಿರಿ 

ದೇವರ ಕೋಣೆಯಲ್ಲಿ ಮಾವಿನ ಎಲೆ ಇಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ನಕಾರಾತ್ಮಕ ಅಂಶ ದೂರಾಗಿ, ಶಾಂತಿಯುತ ಪವಿತ್ರ ವಾತಾವರಣ ಸೃಷ್ಟಿಯಾಗುತ್ತದೆ 

ಮಾವಿನ ಎಲೆಗಳು ದೈವಿಕ ಶಕ್ತಿಯನ್ನು ಆಕರ್ಷಿಸುತ್ತವೆ. ಇದರಿಂದ ಮನೆಯೊಳಗೆ ಆಧ್ಮಾತಿಕ ವಾತಾವರಣ ಪಸರಿಸುತ್ತದೆ

ಮಾವಿನ ಎಲೆಗಳು ವಿಷ್ಣುವಿಗೆ ತುಂಬಾ ಪ್ರಿಯ. ಅವುಗಳನ್ನು ದೇವರ ಕೋಣೆಯಲ್ಲಿ ಇಡುವುದರಿಂದ ದೇವರ ಆಶೀರ್ವಾದ ಸಿಗುತ್ತದೆ, ಇದು ಅದೃಷ್ಟವನ್ನು ಹೆಚ್ಚಿಸುತ್ತದೆ 

ಲಕ್ಷ್ಮೀ ದೇವಿಗೂ ಕೂಡ ಮಾವಿನ ಎಲೆಗಳು ಪ್ರಿಯ. ಇದನ್ನು ದೇವರ ಕೋಣೆಯಲ್ಲಿ ಇಡುವುದರಿಂದ ಸಂಪತ್ತು, ಸಮೃದ್ಧಿ, ಸಂತೋಷ ಸಿಗುತ್ತದೆ 

ಮಾವಿನ ಎಲೆಗಳು ವಾಸ್ತು, ಗ್ರಹ ದೋಷವನ್ನು ನಿವಾರಿಸುತ್ತವೆ 

ಜ್ಯೋತಿಷ್ಯದ ‍ಪ್ರಕಾರ ಮಾವಿನ ಎಲೆಗಳು ಅಡೆತಡೆಗಳನ್ನು ನಿವಾರಿಸುತ್ತವೆ. ಇದನ್ನು ದೇವರ ಕೋಣೆಯಲ್ಲಿ ಇಡುವುದರಿಂದ ಕೆಲಸಗಳು ಯಶಸ್ವಿಯಾಗುತ್ತವೆ 

ಮಾವಿನ ಎಲೆಗಳ ತಾಜಾತನ ಮನಸ್ಸಿಗೆ ಶಾಂತಿ ನೀಡುತ್ತದೆ. ಇದನ್ನು ದೇವಾಲಯದಲ್ಲಿ ಇಡುವುದರಿಂದ ಮಾನಸಿಕ ಶಾಂತಿ, ಉತ್ತಮ ಆರೋಗ್ಯ, ಸಾಮರಸ್ಯ ಹೆಚ್ಚಾಗುತ್ತದೆ 

ಮಾವಿನ ಎಲೆಗಳು ಕುಟುಂಬ ಪ್ರೀತಿ, ಸಾಮರಸ್ಯವನ್ನು ಹೆಚ್ಚಿಸುತ್ತವೆ. ಇದನ್ನು ದೇವರ ಕೋಣೆಯಲ್ಲಿ ಇಡುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಕಾಪಾಡುತ್ತದೆ 

ಈ ಮಾಹಿತಿ ನಂಬಿಕೆಗಳು, ಧಾರ್ಮಿಕ ಗ್ರಂಥ ಹಾಗೂ ವಿವಿಧ ಮಾಧ್ಯಮಗಳನ್ನು ಆಧರಿಸಿದೆ. ಯಾವುದೇ ಮಾಹಿತಿಯನ್ನು ನಂಬುವ ಮೊದಲು ತಜ್ಞರನ್ನು ಸಂಪರ್ಕಿಸಿ 

ಕುಂಬಳಕಾಯಿ ಬೀಜಗಳನ್ನು ತಿನ್ನುವುದರ 5 ಅನಾನುಕೂಲಗಳು

Image Credits: Adobe Stock