ನಂದಿಯ ಕಿವಿಯಲ್ಲಿ ಜನರು ತಮ್ಮ ಕೋರಿಕೆ ಹೇಳುವುದೇಕೆ?

By Reshma
Feb 16, 2025

Hindustan Times
Kannada

ಹಿಂದೂ ಧರ್ಮದಲ್ಲಿ ಶಿವರಾತ್ರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ದಿನ ಶಿವಭಕ್ತರು ಉಪವಾಸ ಮಾಡುವುದು, ವಿಶೇಷ ಪೂಜೆಯ ಮೂಲಕ ಈಶ್ವರನನ್ನು ಭಜಿಸುತ್ತಾರೆ 

ಶಿವನ ದೇವಾಲಯವನ್ನು ಶಿವಾಲಯ ಎಂದೂ ಕರೆಯಲಾಗುತ್ತದೆ. ಯಾವುದೇ ಶಿವ ದೇಗುಲದಲ್ಲಿ ಶಿವನ ಮುಂಭಾಗದಲ್ಲಿ ನಂದಿ ವಿಗ್ರಹ ಇದ್ದೇ ಇರುತ್ತದೆ 

ಶಿವನಲ್ಲಿ ನಾವು ಯಾವುದೇ ಆಸೆಯನ್ನು ಹೇಳಬೇಕು ಎಂದರೆ ಅದನ್ನು ನಂದಿಯ ಕಿವಿಯಲ್ಲಿ ಪಿಸುಗುಟ್ಟಬೇಕು ಎಂಬ ಧಾರ್ಮಿಕ ನಂಬಿಕೆ ಇದೆ. ಇದರ ಹಿಂದಿನ ಕಾರಣವನ್ನ ತಿಳಿಯೋಣ 

ಶಿವನನ್ನು ಆರಾಧಿಸಿದ ನಂತರವಷ್ಟೇ ನಂದಿಗೆ ನಮ್ಮ ಇಷ್ಟಾರ್ಥಗಳನ್ನು ಹೇಳಬೇಕು ಎಂಬ ಕ್ರಮವೂ ಇದೆ 

ಪೂಜೆಯ ನಂತರ ನಂದಿಯ ಎಡ ಕಿವಿಯಲ್ಲಿ ನಮ್ಮ ಮನದ ಬಯಕೆಗಳನ್ನು ಹೇಳಿಕೊಳ್ಳಬೇಕು. ನಂತರ ನಂದಿಗೆ ನೈವೇದ್ಯ ನೀಡಬೇಕು 

ನಂದಿಯ ಕಿವಿಯಲ್ಲಿ ಹೇಳಿದ ಆಸೆಗಳು ಖಂಡಿತ ನೆರವೇರುತ್ತದೆ ಎಂಬ ನಂಬಿಕೆಯೂ ಇದೆ 

ಧಾರ್ಮಿಕ ನಂಬಿಕೆಗಳ ಪ್ರಕಾರ ನಂದಿ ಕಿವಿಯಲ್ಲಿ ಹೇಳಿದ ಆಶಯಗಳು ಬೇಗನೆ ಮಹಾದೇವನನ್ನು ತಲುಪುತ್ತದೆ, ಅಂತಹ ಆಸೆಗಳು ಬೇಗನೆ ಈಡೇರುತ್ತವೆ 

ಈ ಮಾಹಿತಿಯು ಧಾರ್ಮಿಕ ಗ್ರಂಥಗಳು, ನಂಬಿಕೆಗಳು ಹಾಗೂ ವಿವಿಧ ಮಾಧ್ಯಮಗಳನ್ನು ಆಧರಿಸಿದ ಬರಹ. ಇದನ್ನು ನಂಬುವ ಮೊದಲು ತಜ್ಞರ ಸಲಹೆ ಪಡೆಯಿರಿ 

ಅತಿ ಹೆಚ್ಚು ಬಾರಿ ಡಕೌಟ್, ರೋಹಿತ್ ಶರ್ಮಾ ನಂಬರ್ ವನ್‌