ಸ್ವಪ್ನ ಶಾಸ್ತ್ರ: ನಸುಕಿನ ವೇಳೆ ಈ ರೀತಿ ಕನಸುಗಳು ಬಿದ್ದರೆ ಏನರ್ಥ?

By Reshma
Feb 16, 2025

Hindustan Times
Kannada

ಸ್ವಪ್ನಶಾಸ್ತ್ರದ ಪ್ರಕಾರ ಗಾಢ ನಿದ್ರೆಯಲ್ಲಿದ್ದಾಗ ಬೀಳುವ ಕನಸುಗಳು ವಿವಿಧ ಅರ್ಥವನ್ನು ಹೊಂದಿರುತ್ತವೆ 

ಸ್ವಪ್ನಶಾಸ್ತ್ರದ ನಿಯಮದಂತೆ ಬ್ರಾಹ್ಮಿ ಮುಹೂರ್ತದಲ್ಲಿ ಬೀಳುವ ಈ ಕನಸುಗಳು ತುಂಬಾ ಮಂಗಳಕರವಾಗಿರುತ್ತವೆ 

ಚಿಕ್ಕ ಮಗು ಸಂತೋಷದಿಂದ ನಗುವ ಕನಸು ಕಂಡರೆ ಅದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಆರ್ಥಿಕ ಲಾಭದ ಸೂಚಕವಾಗಿದೆ 

ಕನಸಿನಲ್ಲಿ ನದಿಯಲ್ಲಿ ಸ್ನಾನ ಮಾಡುವುದನ್ನು ನೋಡಿದರೆ ಇದರಿಂದ ಹಳೆಯ ಹೂಡಿಕೆಯಿಂದ ನೀವು ಲಾಭ ಪಡೆಯಲಿದ್ದೀರಿ ಎಂದರ್ಥ

ನೀವು ಉದ್ಯೋಗ ಸಂದರ್ಶನ ಎದುರಿಸುತ್ತಿರುವಂತೆ ಕನಸು ಕಂಡರೆ ಶೀಘ್ರದಲ್ಲೇ ನಿಮಗೆ ಆರ್ಥಿಕ ಲಾಭವಾಗಲಿದೆ ಎಂಬುದನ್ನು ಸೂಚಿಸುತ್ತದೆ, ಇದು ಯಶಸ್ಸಿನ ಸೂಚಕವೂ ಹೌದು 

ಕನಸಿನಲ್ಲಿ ನೀರು ತುಂಬಿದ ಹೂಜಿ ಅಥವಾ ಕಲಶವನ್ನು ನೀಡಿದರೆ ನೀವು ಅಪಾರ ಸಂಪತ್ತನ್ನು ಪಡೆಯಲಿದ್ದೀರಿ ಎಂಬುದನ್ನು ಸೂಚಿಸುತ್ತದೆ 

ಕನ್ನಡಿಯಲ್ಲಿ ಮುಖವನ್ನು ನೋಡುತ್ತಿರುವಂತಹ ಕನಸು ಕಂಡರೆ ಇದು ಮಂಗಳ ಫಲಿತಾಂಶವನ್ನು ಸೂಚಿಸುತ್ತದೆ 

ಇದರಿಂದ ಪ್ರೇಮ ಜೀವನದಲ್ಲಿ ಇನ್ನಷ್ಟು ಮಾಧುರ್ಯ ತುಂಬಿರುತ್ತೆ ಎಂಬುದನ್ನು ಸೂಚಿಸುತ್ತದೆ. ಇದು ಹೆಣ್ಣುಮಕ್ಕಳಿಗೆ ಪ್ರೀತಿ ಹೆಚ್ಚುವ ಸಂಕೇತವೂ ಹೌದು 

ಕನಸಿನಲ್ಲಿ ಚಂದ್ರನನ್ನು ನೋಡುವುದು ಕುಟುಂಬದಲ್ಲಿ ಸಂತೋಷ, ಶಾಂತಿ ನೆಲೆಸಿರುತ್ತದೆ ಎಂಬುದನ್ನು ಸೂಚಿಸುತ್ತದೆ 

ಈ ಮಾಹಿತಿಯು ಧಾರ್ಮಿಕ ಗ್ರಂಥಗಳು, ನಂಬಿಕೆಗಳು ಹಾಗೂ ವಿವಿಧ ಮಾಧ್ಯಮಗಳನ್ನು ಆಧರಿಸಿದ ಬರಹ. ಇದನ್ನು ನಂಬುವ ಮೊದಲು ತಜ್ಞರ ಸಲಹೆ ಪಡೆಯಿರಿ 

ಏಪ್ರಿಲ್‌ನಲ್ಲಿ ಜೋಡಿಹಕ್ಕಿಗಳಂತೆ ವಿಹರಿಸಲು ರೊಮ್ಯಾಂಟಿಕ್ ತಾಣಗಳಿವು