ಜೀವನದಲ್ಲಿನ ಈ ಲಕ್ಷಣಗಳು ಶನಿ ದೋಷದ ಸಂಕೇತಗಳು
By Raghavendra M Y
Jan 07, 2025
Hindustan Times
Kannada
ಹಿಂದೂ ಧರ್ಮದ ಪ್ರಕಾರ, ನವಗ್ರಹಗಳಲ್ಲಿ ಶನಿ ದೇವರಿಗೆ ವಿಶೇಷ ಸ್ಥಾನವಿದೆ. ಶನಿ ದೇವನನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗಿದೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯು ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದರೆ ಶನಿ ದೋಷ ಉಂಟಾಗುತ್ತೆ. ಈ ಕಾರಣದಿಂದ ವೃತ್ತಿ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ
ಶನಿ ದೋಷ ಬಗ್ಗೆ ಹಲವಾರು ಸಂಕೇತಗಳಿವೆ. ಈ ಬಗ್ಗೆ ತಿಳಿದುಕೊಂಡರೆ ಶನಿ ದೋಷಕ್ಕೆ ಪರಿಹಾರ ಕಂಡುಕೊಳ್ಳಬಹುದು
ಸಣ್ಣ ವಿಷಯಕ್ಕೂ ಸಿಟ್ಟು ಮಾಡಿಕೊಳ್ಳುವುದು, ಬೇಗ ಕೋಪ ಮಾಡಿಕೊಳ್ಳುವುದು, ಜೂಜು ಅಥವಾ ಬೆಟ್ಟಿಂಗ್ ಹುಚ್ಚು, ಈ ಎಲ್ಲಾವೂ ಶನಿ ದೋಷದ ಸಂಕೇತಗಳು
ಹಠಾತ್ ಆರ್ಥಿಕ ನಷ್ಟ ಅಥವಾ ವ್ಯವಹಾರದಲ್ಲಿ ನಷ್ಟವಾಗುವುದು ಶನಿಯ ಅಶುಭ ಪರಿಣಾಮದ ಸಂಕೇತವಾಗಿರುತ್ತೆ
ಶನಿ ದೋಷದಿಂದಾಗಿ ನೀವು ವೃತ್ತಿ ಮತ್ತು ಉದ್ಯೋಗದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರಬಹುದು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಯಿ ಕಚ್ಚಿದರೆ, ಇತರೆ ಯಾವುದೇ ಪ್ರಾಣಿಗಳಿಂದ ದಾಳಿ ಅಥವಾ ಇವುಗಳಿಂದ ಗಾಯಗೊಂಡರೂ ಶನಿ ದೋಷದ ಸಂಕೇತಗಳೆಂದು ಪರಿಗಣಿಸಲಾಗಿದೆ
ಶನಿಯು ಅಶುಭವಾಗಿದ್ದರೆ ಕಾಲಿಗೆ ಸಂಬಂಧಿಸಿದ ರೋಗಗಳು ಕಾಣಿಸಿಕೊಳ್ಳಬಹುದು
ದುಬಾರಿ ಬೆಲೆಯ ವಸ್ತುಗಳ ಹಠಾತ್ ನಷ್ಟವು ಶನಿಯ ದುಷ್ಟ ಕಣ್ಣಿನ ಸಂಕೇತವಾಗಿದೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಬಾಲಿವುಡ್ ನಟಿ ರವೀನಾ ಟಂಡನ್ ಮಸ್ತ್ ಮಸ್ತ್ ಫೋಟೋಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ