ಸಾಮಾನ್ಯವಾಗಿ ಮಹಿಳೆಯರು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಬಹಳ ಇಷ್ಟಪಡುತ್ತಾರೆ. ಆ ಕಾರಣದಿಂದಲೇ ಅವರು ಅಡಿಯಿಂದ ಮುಡಿಯವರೆಗೆ ಆಭರಣಗಳನ್ನು ಧರಿಸಲು ಇಷ್ಟಪಡುತ್ತಾರೆ
ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಧರಿಸಲು ಕೆಲವು ಕ್ರಮಗಳಿವೆ. ಹಾಗಾದರೆ ಚಿನ್ನದ ಆಭರಣ ಧರಿಸಲು ಇರುವ ನಿಯಮಗಳೇನು ನೋಡಿ
ವಾಸ್ತವವಾಗಿ ಚಿನ್ನದ ಆಭರಣವು ಲಕ್ಷ್ಮೀದೇವಿಯೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ. ಸಾಮಾನ್ಯವಾಗಿ ಕಾಲಿಗೆ ಬೆಳ್ಳಿ ಧರಿಸುವುದು ಸಹಜ, ಆದರೆ ಚಿನ್ನ ಧರಿಸಬಹುದೇ ಎಂಬ ಪ್ರಶ್ನೆ ನಿಮಗೂ ಕಾಡಬಹುದು
ಜ್ಯೋತಿಷ್ಯದ ಪ್ರಕಾರ ಮಹಿಳೆಯರು ಸೊಂಟದ ಕೆಳಗೆ ಚಿನ್ನ ಆಭರಣ ಧರಿಸಬಾರದು
ಕಾಲ್ಗೆಜ್ಜೆ ಹಾಗೂ ಕಾಲುಂಗುರವನ್ನು ಬೆಳಿಯದ್ದೇ ಧರಿಸಬೇಕು
ಧಾರ್ಮಿಕ ನಂಬಿಕೆಗಳ ಪ್ರಕಾರ ಚಿನ್ನ ಭಗವಾನ್ ವಿಷ್ಣುವಿನ ನೆಚ್ಚಿನ ಲೋಹವಾಗಿದೆ ಮತ್ತು ಇದನ್ನು ಲಕ್ಷ್ಮೀದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ
ಹಾಗಾಗಿ ಮಹಿಳೆಯರು ಕಾಲಿಗೆ ಚಿನ್ನದ ಕಾಲ್ಗೆಜ್ಜೆ ಅಥವಾ ಕಾಲುಂಗುರ ಧರಿಸಿದರೆ ಲಕ್ಷ್ಮೀದೇವಿಗೆ ಅವಮಾನ ಮಾಡಿದಂತಾಗುತ್ತದೆ. ಇದರಿಂದ ಆಕೆ ಕೋಪಗೊಳ್ಳುತ್ತಾಳೆ
ಇನ್ನೊಂದು ನಂಬಿಕೆಯ ಪ್ರಕಾರ ಚಿನ್ನವು ಗುರುಗ್ರಹದ ಸಂಕೇತವಾಗಿದೆ. ಗುರುವು ಸಂಪತ್ತು ಹಾಗೂ ಸಮೃದ್ಧಿಯ ಸಂಕೇತವಾಗಿದೆ
ಹಾಗಾಗಿ ಮಹಿಳೆಯು ಕಾಲಿಗೆ ಚಿನ್ನದ ಉಂಗುರ ಧರಿಸಿದರೆ ಆಕೆಯ ವೈವಾಹಿಕ ಜೀವನದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ
ಈ ಬರಹವು ಧಾರ್ಮಿಕ ನಂಬಿಕೆ, ಶಾಸ್ತ್ರಗಳನ್ನು ಆಧರಿಸಿದ ಬರಹ. ಈ ಮಾಹಿತಿಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸುವುದು ಉತ್ತಮ
ಸಿನಿಮಾಗಳಲ್ಲಿ ಪುಷ್ಪ ನಟ ಅಲ್ಲು ಅರ್ಜುನ್‍ರ ವಿಭಿನ್ನ ಕೇಶವಿನ್ಯಾಸಗಳಿವು