ಶನಿ ಜಯಂತಿ ದಿನ ಏನು ದಾನ ಮಾಡಬೇಕು; ಇದರಿಂದ ಏನೆಲ್ಲಾ ಪ್ರಯೋಜನಗಳಿವೆ
By Raghavendra M Y
May 15, 2025
Hindustan Times
Kannada
ಶನಿ ಜಯಂತಿ ದಿನ ನ್ಯಾಯ ಮತ್ತು ಕರ್ಮದ ದೇವರು ಶನಿ ದೇವರನ್ನು ಪೂಜಿಸುವುದರಿಂದ ಸಾಕಷ್ಟು ಶುಭಫಲಗಳಿವೆ ಎಂದು ನಂಬಲಾಗಿದೆ
2025ರ ಮೇ 27 ರಂದು ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಶನಿದೇವನ ವಿಶೇಷ ಪೂಜೆ ಮಾಡಲಾಗುತ್ತದೆ
ಇಷ್ಟೇ ಅಲ್ಲ, ಶನಿ ಜಯಂತಿಯ ದಿನದಂದು ಶನಿ ದೇವರನ್ನು ಮೆಚ್ಚಿಸಲು ವಿವಿಧ ಕೆಲಸಗಳನ್ನು ಮಾಡುತ್ತಾರೆ
ಈ ದಿನದಂದು ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡುವ ಮೂಲಕ ಶನಿ ದೇವರನ್ನು ಮೆಚ್ಚಿಸಲಾಗುತ್ತದೆ. ಏನು ದಾನ ಮಾಡಬೇಕೆಂಬುದನ್ನು ತಿಳಿಯಿರಿ
ಕಪ್ಪು ಎಳ್ಳು: ಶನಿ ಜಯಂತಿಯಂದು ಕಪ್ಪು ಎಳ್ಳನ್ನು ದಾನ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ. ಏಕೆಂದರೆ ಕಪ್ಪು ಎಳ್ಳು ಶನಿ ದೇವರಿಗೆ ತುಂಬಾ ಪ್ರಿಯವಾದದ್ದು
ಕಪ್ಪು ಎಳ್ಳು ದಾನದಿಂದ ಶನಿ ದೇವರ ಆಶೀರ್ವಾದವನ್ನು ತರುತ್ತದೆ. ಜೀವನದಲ್ಲಿ ಅಡೆತಡೆಗಳನ್ನು ತೆಗೆದುಹಾಕುತ್ತದೆ
ಸಾಸಿವೆ ಎಣ್ಣೆ: ಶನಿ ದೇವನಿಗೆ ಸಾಸಿವೆ ಎಣ್ಣೆಯನ್ನು ದಾನ ಮಾಡುವುದು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ. ಇದು ಜಾತಕದಲ್ಲಿ ಅಶುಭ ಗ್ರಹಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ
ಈ ದಿನ ಕಬ್ಬಿಣದ ವಸ್ತುಗಳನ್ನು ದಾನ ಮಾಡುವುದು ಪ್ರಯೋಜನಕಾರಿ. ಈ ದಾನವು ಶನಿಯ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ
ಕಪ್ಪು ಉದ್ದಿನ ಬೇಳೆಯನ್ನು ದಾನ ಮಾಡುವುದರಿಂದ ಶನಿ ದೇವರ ಆಶೀರ್ವಾದ ದೊರೆಯುತ್ತದೆ. ಉದ್ದಿನ ಬೇಳೆಯಿಂದ ಮಾಡಿದ ಖಿಚಡಿಯನ್ನು ಸಹ ದಾನ ಮಾಡಬಹುದು
ಇದಲ್ಲದೆ, ಕಪ್ಪು ಬಟ್ಟೆ, ಛತ್ರಿ ಹಾಗೂ ಶೂಗಳನ್ನು ದಾನ ಮಾಡುವುದನ್ನು ಸಹ ಫಲಪ್ರದವೆಂದು ಪರಿಗಣಿಸಲಾಗುತ್ತದೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆ ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ