ಜ್ಯೇಷ್ಠ ಮಾಸದದಲ್ಲಿ ಯಾವ ವಸ್ತು, ಪದಾರ್ಥಗಳನ್ನು ದಾನ ಮಾಡಬಾರದು
By Raghavendra M Y May 24, 2025
Hindustan Times Kannada
ಹಿಂದೂ ಪಂಚಾಗದಲ್ಲಿ 3ನೇ ತಿಂಗಳು ಜ್ಯೇಷ್ಠ ಮಾಸ. ಈ ಮಾಸದಲ್ಲಿ ಹನುಮಂತ ಮತ್ತು ಸೂರ್ಯ ದೇವರ ಪೂಜೆಯಿಂದ ವಿಶೇಷ ಫಲಗಳನ್ನು ಸಿಗುತ್ತವೆ ಎಂದು ನಂಬಲಾಗಿದೆ
ಜ್ಯೇಷ್ಠ ಮಾಸದಲ್ಲಿ ಸ್ನಾನ, ದಾನ ಮತ್ತು ಪೂಜೆ ಮಾಡುವುದರಿಂದ ಪುಣ್ಯ ಸಿಗುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ
ಜ್ಯೇಷ್ಠ ಮಾಸದಲ್ಲಿ ದಾನವು ವಿಶೇಷ ಮಹತ್ವವನ್ನು ಹೊಂದಿದೆ. ಆದರೆ ಶಾಸ್ತ್ರಗಳ ಪ್ರಕಾರ, ಕೆಲವು ವಸ್ತುಗಳನ್ನು ದಾನ ಮಾಡುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ತಿಳಿಯೋಣ
ಬದನೆಕಾಯಿ: ಜ್ಯೇಷ್ಠ ಮಾಸದಲ್ಲಿ ಬದನೆಕಾಯಿ ದಾನ ಮಾಡಬಾರದು ಅಥವಾ ಸೇವಿಸಬಾರದು. ಶಾಸ್ತ್ರಗಳ ಪ್ರಕಾರ, ಬದನೆಕಾಯಿ ರಾಹುವಿಗೆ ಸಂಬಂಧಿಸಿದೆ. ಇದನ್ನು ದಾನ ಮಾಡಿದರೆ ಮಕ್ಕಳಿಗೆ ತೊಂದರೆಯಾಗಬಹುದು
ಬೆಳ್ಳುಳ್ಳಿ ಮತ್ತು ಸಾಸಿವೆ: ಜ್ಯೇಷ್ಠ ಮಾಸದಲ್ಲಿ ಬೆಳ್ಳುಳ್ಳಿ ಮತ್ತು ಸಾಸಿವೆ ದಾನ ಮಾಡಬಾರದು. ಈ ವಸ್ತುಗಳು ಉಷ್ಣತೆಯನ್ನು ಹೆಚ್ಚಿಸುತ್ತವೆ. ಜಾತಕದಲ್ಲಿ ಮಂಗಳನ ದುಷ್ಪರಿಣಾಮಗಳನ್ನು ಹೆಚ್ಚಿಸಬಹುದು. ಇದು ಆರೋಗ್ಯ ಮತ್ತು ಮಾನಸಿಕ ಅಶಾಂತಿಗೆ ಕಾರಣವಾಗಬಹುದು
ಹಾಲು ಮತ್ತು ಮೊಸರು: ಸೂರ್ಯಾಸ್ತದ ನಂತರ ಹಾಲು ಮತ್ತು ಮೊಸರು ದಾನ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ. ಇವು ಚಂದ್ರ ಗ್ರಹಕ್ಕೆ ಸಂಬಂಧಿಸಿವೆ. ಇವುಗಳನ್ನು ದಾನ ಮಾಡುವುದರಿಂದ ಆರ್ಥಿಕ ಸ್ಥಿತಿ ದುರ್ಬಲವಾಗಬಹುದು
ಹಣ ದಾನ: ಜ್ಯೇಷ್ಠ ಮಾಸದಲ್ಲಿ ಸೂರ್ಯಾಸ್ತದ ನಂತರ ಯಾರಿಗೂ ಹಣವನ್ನು ದಾನ ಮಾಡಬಾರದು. ಶಾಸ್ತ್ರಗಳ ಪ್ರಕಾರ, ಇದು ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗುತ್ತೆ. ಇದು ಮನೆಯಲ್ಲಿ ಬಡತನಕ್ಕೆ ಕಾರಣವಾಗಬಹುದು
ಹರಿದ ಬಟ್ಟೆಗಳು: ಜ್ಯೇಷ್ಠ ಮಾಸದಲ್ಲಿ ಹರಿದ ಅಥವಾ ಹಳೆಯ ಬಟ್ಟೆಗಳನ್ನು ದಾನ ಮಾಡುವುದನ್ನು ತಪ್ಪಿಸಿ. ಇದು ರಾಹು ದೋಷವನ್ನು ಹೆಚ್ಚಿಸುತ್ತದೆ. ಕೆಲಸದಲ್ಲಿ ವಿಫಲತೆಗೆ ಕಾರಣವಾಗಬಹುದು. ಸ್ವಚ್ಛ ಮತ್ತು ಒಳ್ಳೆಯ ಬಟ್ಟೆಗಳನ್ನು ಮಾತ್ರ ದಾನ ಮಾಡಿ
ಉಕ್ಕು ಅಥವಾ ಪ್ಲಾಸ್ಟಿಕ್: ಜ್ಯೇಷ್ಠ ಮಾಸದಲ್ಲಿ ಉಕ್ಕು ಅಥವಾ ಪ್ಲಾಸ್ಟಿಕ್ ವಸ್ತುಗಳನ್ನು ದಾನ ಮಾಡುವುದನ್ನು ತಪ್ಪಿಸಿ. ಈ ವಿಷಯಗಳು ವ್ಯವಹಾರ ಮತ್ತು ಆರ್ಥಿಕ ಸ್ಥಿತೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ನಷ್ಟಗಳಿಗೆ ಕಾರಣವಾಗಬಹುದು
ಜ್ಯೇಷ್ಠ ಮಾಸದಲ್ಲಿ ದಾನ ಮಾಡುವಾಗ ಶಾಸ್ತ್ರದ ನಿಯಮಗಳನ್ನು ಅನುಸರಿಸಿ. ನೀರು, ಮಡಿಕೆ ಮತ್ತು ಕೆಂಪು ಬಟ್ಟೆಗಳನ್ನು ದಾನ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆ ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ