ದೀಪ ಬೆಳಗಿದ ನಂತರ ಉಳಿದ ಬತ್ತಿಯನ್ನು ಏನು ಮಾಡಬೇಕು

By Raghavendra M Y
Jan 02, 2025

Hindustan Times
Kannada

ಹಿಂದೂ ಧರ್ಮದಲ್ಲಿ ದೀಪ ಬೆಳಗಿಸುವುದಕ್ಕೆ ಧಾರ್ಮಿಕ ಮಹತ್ವವಿದೆ. ಇದು ಕತ್ತಲೆಯ ಮೇಲಿನ ವಿಜಯದ ಸಂಕೇತವೆಂದು ಪರಿಗಣಿಸಲಾಗಿದೆ

ಬೆಳಗ್ಗೆ, ಸಂಜೆ ಹಾಗೂ ವಿಶೇಷ ಸಂದರ್ಭಗಳಲ್ಲಿ ತುಪ್ಪ ಅಥವಾ ಎಣ್ಣೆಯ ದೀಪಗಳನ್ನು ಹಚ್ಚುವ ಸಂಪ್ರದಾಯವಿದೆ

ದೀಪ ಬೆಳಗಿಸುವ ಕುರಿತು ಕೆಲವು ನಿಯಮಗಳಿವೆ. ದೀಪದಲ್ಲಿ ಉಳಿಯುವ ಸುಟ್ಟ ಬತ್ತಿಯನ್ನು ಏನು ಮಾಡಬೇಕು ಎಂಬುದನ್ನು ತಿಳಿಯಿರಿ

ಧಾರ್ಮಿಕ ನಂಬಿಕೆಗಳ ಪ್ರಕಾರ, ದೀಪವು ಮಧ್ಯದಲ್ಲಿ ಹಾರಿಹೋದರೆ, ಅದನ್ನು ಮತ್ತೆ ಬೆಳಗಿಸಬಾರದು

ದೀಪದಿಂದ ಉಳಿಯುವ ಬತ್ತಿಯನ್ನು ಸುಡುವುದು ಒಳ್ಳೆಯದೆಂದು ಪರಿಗಣಿಸಲಾಗುವುದಿಲ್ಲ. ದೀಪವನ್ನು ನಂದಿಸಿದರೆ ದೇವರಲ್ಲಿ ಕ್ಷಮೆಯಾಚಿಸಬೇಕು

ದೀಪದಲ್ಲಿ ಉಳಿಯುವ ಬತ್ತಿಯನ್ನು ಎಸೆಯಬಾರದು. ಇದನ್ನ ಎಚ್ಚರಿಕೆಯಿಂದ ನಿರ್ವಹಿಸಬೇಕು ಅಥವಾ ನೀರಿನಲ್ಲಿ ಬಿಡಬೇಕು

ಇದಲ್ಲದೇ ಉಳಿದ ಬತ್ತಿಯನ್ನು ಪೂಜಾ ಸಾಮಗ್ರಿ ಸಂಗ್ರಹಿಸುವ ಸ್ಥಳದಲ್ಲಿ ಇಡಬೇಕು

ಒಂದು ವೇಳೆ ನಿಮಗೆ ಈ ಸೌಲಭ್ಯ ಇಲ್ಲದಿದ್ದರೆ, ಉಳಿದ ಬತ್ತಿಯನ್ನು ಒಳ್ಳೆಯ ಕಡೆ ನೆಲದಲ್ಲಿ ಹೂಳಬಹುದು

ದೀಪದಿಂದ ಉಳಿದ ಬತ್ತಿಯನ್ನು ಎಲ್ಲೆಂದರಲ್ಲಿ ಎಸೆದರೆ ಅದು ಜನ ನಡೆದಾಡುವ ಕಡೆ ಪಾದಕ್ಕೆ ಸಿಗಬಹುದು. ಇದು ಅತ್ಯಂತ ಅಶುಭವೆಂದು ಪರಿಗಣಿಸಲಾಗಿದೆ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್‌ ಸಂಜನಾ ಪಾತ್ರಧಾರಿ ಆರತಿ