ಲಕ್ಷ್ಮಿ, ಗಣೇಶ ಮೂರ್ತಿಗಳನ್ನು ಮನೆಯಲ್ಲಿ ಎಲ್ಲಿ, ಹೇಗೆ ಇಡಬೇಕು

By Raghavendra M Y
Nov 01, 2024

Hindustan Times
Kannada

ಹಿಂದೂ ಧರ್ಮದಲ್ಲಿ ಗಣೇಶನನ್ನು ಜ್ಞಾನದ ದೇವರು ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ

ಲಕ್ಷ್ಮಿ ಮತ್ತು ಗಣೇಶನ ಮೂರ್ತಿಗಳನ್ನು ಯಾವಾಗಲೂ ಒಟ್ಟಿಗೆ ಇಡುವುದರಿಂದ ಹಲವು ಶುಭ ಫಲಗಳಿವೆ. ಜ್ಞಾನ ಹೆಚ್ಚಾಗುತ್ತೆ, ಹೆಚ್ಚಿನ ಹಣ ಗಳಿಸುತ್ತಾರೆ

ಜ್ಞಾನವಿಲ್ಲದಿದ್ದರೆ ಸಂಪತ್ತು ಬರುವುದಿಲ್ಲ ಎನ್ನಲಾಗುತ್ತದೆ. ಈ ಎರಡೂ ದೇವತೆಗಳ ವಿಗ್ರಹಗಳನ್ನು ಒಟ್ಟಿಗೆ ಇಡಲಾಗುತ್ತದೆ

ಮನೆಯ ದೇವರ ಕೋಣೆಯಲ್ಲಿ ಲಕ್ಷ್ಮಿ ಮತ್ತು ಗಣೇಶನ ವಿಗ್ರಹಗಳನ್ನು ಒಟ್ಟಿಗೆ ಇಡಬೇಕಾದರೆ ಕೆಲವು ನಿಯಮಗಳನ್ನು ಪಾಲಿಸಬೇಕು

ವಿಗ್ರಹಗಳನ್ನು ಇರಿಸುವಾಗ ಲಕ್ಷ್ಮಿ-ಗಣೇಶ ವಿಗ್ರಹವು ಎಲ್ಲಿ ಇಡಲಾಗುತ್ತದೆಯೋ ಆ ಸ್ಥಳವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು

ಲಕ್ಷ್ಮಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ  ಸ್ಥಳದಲ್ಲಿ ಕೆಂಪು ಬಣ್ಣದ ಬಟ್ಟೆಯನ್ನು ಹಾಕಿ

ಮಹಾ ಲಕ್ಷ್ಮಿ ಮೂರ್ತಿಯ ಎಡಭಾಗದಲ್ಲಿ ಗಣೇಶನ ವಿಗ್ರಹವನ್ನು ಇಡಬೇಕಾಗುತ್ತದೆ

ವಾಸ್ತು ಪ್ರಕಾರ, ಲಕ್ಷ್ಮಿ-ಗಣೇಶನ ವಿಗ್ರಹಗಳನ್ನು ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ಇಡಬೇಕು

ಈ ದಿಕ್ಕನ್ನು ಮಂಗಳಕರ ಮತ್ತು ಧನಾತ್ಮಕ ಶಕ್ತಿಯ ಮೂಲವೆಂದು ಪರಿಗಣಿಸಲಾಗುತ್ತದೆ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ತನಗಿಂತ 7 ವರ್ಷ ದೊಡ್ಡವಳನ್ನು ಪ್ರೀತಿಸುತ್ತಿದ್ದ ಶಿವಂ ದುಬೆ!