ಶ್ರೀಕೃಷ್ಣ ಏಕೆ ಅರ್ಜುನನ ಸಾರಥಿಯಾದ; ಆಸಕ್ತಿಕರ ಮಾಹಿತಿ ಇಲ್ಲಿದೆ

By Raghavendra M Y
May 13, 2025

Hindustan Times
Kannada

ಮಹಾಭಾರತದಲ್ಲಿ ಶ್ರೀಕೃಷ್ಣನು ಪಂಚ ಪಾಂಡವರಿಗೆ ಮಾರ್ಗದರ್ಶನ ನೀಡಿದನು. ಆದರೆ ಕುರುಕ್ಷೇತ್ರ ಯುದ್ದದಲ್ಲಿ ಅರ್ಜುನನ ರಥದ ಸಾರಥಿಯಾದನು

ಕೃಷ್ಣನು ಪಾಂಡವರ ಸ್ನೇಹಿತ, ಗುರುವಾಗಿದ್ದನು. ಯುಧಿಷ್ಠಿರನಿಗೆ ನೀತಿಯನ್ನು ಕಲಿಸಿದರೆ, ಭೀಮನಿಗೆ ಬಲವನ್ನು, ನಕುಲ ಮತ್ತು ಸಹದೇವನಿಗೆ ತಂತ್ರಗಳನ್ನು ಹೇಳಿಕೊಟ್ಟನು. ಆದರೆ ಅರ್ಜುನನ ಜೊತೆಗಿನ ಸಂಬಂಧ ವಿಶೇಷವಾಗಿತ್ತು

ಪುರಾಣಗಳ ಪ್ರಕಾರ, ಅರ್ಜುನನು ಯಾವಾಗಲೂ ಕೃಷ್ಣನನ್ನು ದೇವರೆಂದು ಪರಿಗಣಿಸುತ್ತಿದ್ದನು. ಭಕ್ತಿ ಮತ್ತು ಸಮರ್ಪಣೆ ಕೃಷ್ಣನ ಹೃದಯವನ್ನು ಗೆದ್ದಿತ್ತು. ಅರ್ಜುನನ ನಿಷ್ಠೆಯೇ ಕೃಷ್ಣನು ಇಷ್ಟಪಡುವಂತೆ ಮಾಡಿತ್ತು

ದ್ರೌಪದಿಯ ಸ್ವಯಂವರದಲ್ಲಿ ಅರ್ಜುನನು ಮೀನಿನ ಕಣ್ಣನ್ನು ಚುಚ್ಚುವ ಮೂಲಕ ಕೃಷ್ಣನ ದೃಷ್ಟಿಯಲ್ಲಿ ತನ್ನ ಮೌಲ್ಯವನ್ನು ಸಾಬೀತುಪಡಿಸಿದನು. ಆಗ ಕೃಷ್ಣನು ನಿರ್ದಿಷ್ಟವಾಗಿ ಅರ್ಜುನನ್ನು ಆರಿಸಿಕೊಂಡನು

ಮಹಾಭಾರತದ ಯುದ್ಧದ ಮೊದಲು ಕೌರವರು ಮತ್ತು ಪಾಂಡವರು ಇಬ್ಬರೂ ಸಹಾಯ ಕೇಳಲು ಕೃಷ್ಣನ ಬಳಿಗೆ ಹೋದರು. ದುರ್ಯೋಧನನು ಕೃಷ್ಣನ ಸೈನ್ಯವನ್ನು ಕೇಳಿದನು, ಆದರೆ ಅರ್ಜುನನು ಕೃಷ್ಣನನ್ನೇ ಆರಿಸಿಕೊಂಡನು

ಕೃಷ್ಣನು ಯುದ್ಧದಲ್ಲಿ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುತ್ತಾನೆ. ಆದ್ದರಿಂದ ಅರ್ಜುನನ ಸಾರಥಿಯಾಗಲು ಮತ್ತು ಅವನಿಗೆ ಮಾರ್ಗದರ್ಶನ ನೀಡಲು ನಿರ್ಧರಿಸುತ್ತಾನೆ

ಮಹಾಭಾರತದ ಯುದ್ಧಭೂಮಿಯಲ್ಲಿ ಅರ್ಜುನನ ಮನಸ್ಸು ಕಳವಳಗೊಂಡಿತು. ನಂತರ ಕೃಷ್ಣನು ಭಗವದ್ಗೀತೆಯನ್ನು ಬೋಧಿಸಿ ಅವರ ಕರ್ತವ್ಯದ ಅರಿವು ಮೂಡಿಸಿದನು. ಈ ಜ್ಞಾನವನ್ನು ಅರ್ಜುನನಿಗೆ ಮಾತ್ರ ಪಡೆಯಲು ಸಾಧ್ಯವಾಯಿತು

ಅರ್ಜುನನು ಒಬ್ಬ ಮಹಾನ್ ಬಿಲ್ಲುಗಾರನಷ್ಟೇ ಅಲ್ಲ, ಶುದ್ಧ ಆತ್ಮ ಮತ್ತು ಶುದ್ಧ ಮನಸ್ಸು ಹೊಂದಿದ್ದನು. ಅರ್ಜುನ ಮಾತ್ರ ತನ್ನ ದೈವಿಕ ಸಂದೇಶವನ್ನು ಜಗತ್ತಿಗೆ ತಿಳಿಸಬಲ್ಲನೆಂದು ಕೃಷ್ಣನಿಗೆ ತಿಳಿದಿತ್ತು

ಕೃಷ್ಣನು ಅರ್ಜುನನ ರಥ ಸಾರಥಿಯಾಗುವುದು ಕೇವಲ ಯುದ್ಧ ತಂತ್ರವಾಗಿರಲಿಲ್ಲ, ಬದಲಾಗಿ ಭಕ್ತಿ, ನಂಬಿಕೆ ಹಾಗೂ ಕರ್ತವ್ಯದ ಸಂಕೇತವಾಗಿತ್ತು

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆ ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS