ಸೂರ್ಯಾಸ್ತದ ಬಳಿಕ ಗಿಡದಲ್ಲಿ ಹೂವು, ಎಲೆಗಳನ್ನು ಏಕೆ ಕೀಳಬಾರದು?

By Raghavendra M Y
Jan 22, 2025

Hindustan Times
Kannada

ಹಿಂದೂ ಧರ್ಮದಲ್ಲಿ ಅನೇಕ ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ಅನುಸರಿಸಲಾಗುತ್ತದೆ. ಸಂಜೆಯ ನಂತರ ಹೂವುಗಳು ಮತ್ತು ಎಲೆಗಳನ್ನು ಕೀಳಬಾರದೆಂದು ಅನೇಕರು ಹೇಳುತ್ತಾರೆ

 ಸೂರ್ಯಾಸ್ತದ ಬಳಿಕ ಗಿಡದಲ್ಲಿನ ಹೂವು, ಎಲೆಗಳನ್ನು ಏಕೆ ಕೀಳಬಾರದು ಮತ್ತು ಅದರ ಹಿಂದಿನ ವಿವಿಧ ಕಾರಣಗಳನ್ನು ತಿಳಿಯೋಣ

ಸಸ್ಯಗಳಿಗೂ ಜೀವವಿದೆ, ಮತ್ತು ಅವು ಸಂಜೆ ಸೂರ್ಯಾಸ್ತದ ನಂತರ ವಿಶ್ರಾಂತಿ ಪಡೆಯುತ್ತವೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಆದ್ದರಿಂದ ವಿಶ್ರಾಂತಿ ಸಮಯದಲ್ಲಿ ಅವುಗಳನ್ನು ಮುಟ್ಟಬಾರದು

ಯಾರಾದರೂ ಮಲಗಿರುವಾಗ ಅಥವಾ ವಿಶ್ರಾಂತಿ ಪಡೆಯುತ್ತಿರುವಾಗ ಅವರಿಗೆ ಡಿಸ್ಟರ್ಬ್ ಮಾಡುವುದಿಲ್ಲ. ಅಂತೆಯೇ, ಸಂಜೆಯ ನಂತರ ಹೂವುಗಳು ಮತ್ತು ಎಲೆಗಳನ್ನು ಸಹ ಮುಟ್ಟಬಾರದು

ಕೀಟಗಳು ಮತ್ತು ಪಕ್ಷಿಗಳು ಸಂಜೆ ಮರಗಳು ಮತ್ತು ಸಸ್ಯಗಳಲ್ಲಿ ವಾಸಿಸುತ್ತವೆ. ನಾವು ಅವುಗಳ ವಿಶ್ರಾಂತಿಗೆ ಅಡ್ಡಿಪಡಿಸಿದರೆ ಅವುಗಳಿಗೆ ತೊಂದರೆ ಮಾಡಿದಂತಾಗುತ್ತದೆ ಎಂಬುದು ಮತ್ತೊಂದು ಕಾರಣ

ಸಂಜೆಯ ನಂತರ ಹೂವುಗಳ ಪರಿಮಳ ಮತ್ತು ಸೌಂದರ್ಯ ಎರಡೂ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಪೂಜೆಗೆ ಅರ್ಪಿಸುವ ಹೂವುಗಳನ್ನು ಯಾವುದೇ ಕಾರಣಕ್ಕೂ ಸಂಜೆಯ ನಂತರ ಕತ್ತರಿಸಬಾರದು ಅಥವಾ ಮುಟ್ಟಬಾರದು ಎಂದು ಹೇಳಲಾಗುತ್ತದೆ

ಸಂಜೆಯ ನಂತರ ಹೂವುಗಳು ಮತ್ತು ಎಲೆಗಳನ್ನು ಕೀಳಬಾರದು ಎಂಬುದಕ್ಕೆ ವೈಜ್ಞಾನಿಕ ಕಾರಣಗಳಿವೆ

ಮರಗಳು ಮತ್ತು ಸಸ್ಯಗಳು ರಾತ್ರಿಯಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತವೆ, ಆದ್ದರಿಂದ ಆ ಸಮಯದಲ್ಲಿ ಅವುಗಳನ್ನು ಸ್ಪರ್ಶಿಸುವುದು ಅಥವಾ ಮರದ ಕೆಳಗೆ ಮಲಗುವುದು ಸೂಕ್ತವಲ್ಲ

ಸೂಚನೆ: ಇದು ವಿಜ್ಞಾನ ಮತ್ತು ನಂಬಿಕೆಗಳನ್ನು ಆಧಾರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಮನೆಯಲ್ಲೇ ಈ ರೀತಿ ತಯಾರಿಸಿ ಬಿರಿಯಾನಿ ಮಸಾಲೆ