ಆಸ್ಟ್ರೇಲಿಯನ್‌ ಓಪನ್‌ 2025 ಬಹುಮಾನ ಮೊತ್ತ ಎಷ್ಟು?

By Jayaraj
Jan 12, 2025

Hindustan Times
Kannada

ಇಂದಿನಿಂದ (ಜ.12) ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಗ್ರಾಂಡ್‌ ಸ್ಲ್ಯಾಮ್‌ ಟೂರ್ನಿಯ ಪ್ರಮುಖ ಪಂದ್ಯಗಳು ಆರಂಭವಾಗುತ್ತಿವೆ.

ಸ್ಟಾರ್‌ ಟೆನಿಸ್‌ ಆಟಗಾರರು ಪ್ರತಿಷ್ಠಿತ ಪ್ರಶಸ್ತಿ ಗೆಲ್ಲಲು ಕಣಕ್ಕಿಳಿಯುತ್ತಿದ್ದಾರೆ.

ಜನವರಿ 25ರಂದು ಮಹಿಳೆಯರ ಫೈನಲ್‌ ಪಂದ್ಯ ನಡೆಯಲಿದ್ದು, 26ರಂದು ಪುರುಷರ ವಿಭಾಗದ ಚಾಂಪಿಯನ್‌ ಯಾರು ಎಂಬುದು ತಿಳಿಯಲಿದೆ.

ಫೈನಲ್‌

ಆಸ್ಟ್ರೇಲಿಯನ್‌ ಓಪನ್‌ ಗೆದ್ದು ಚಾಂಪಿಯನ್‌ ಆಗುವ ಆಟಗಾರರಿಗೆ ಭರ್ಜರಿ ನಗದು ಬಹುಮಾನ ಸಿಗಲಿದೆ.

ಫೈನಲ್‌ನಲ್ಲಿ ಗೆಲ್ಲುವ ಆಟಗಾರರಿಗೆ ಬರೋಬ್ಬರಿ 35 ಲಕ್ಷ ಆಸ್ಟ್ರೇಲಿಯನ್‌ ಡಾಲರ್‌ ಬಹುಮಾನ ಸಿಗಲಿದೆ. ರೂಪಾಯಿ ಮೌಲ್ಯದಲ್ಲಿ ಹೇಳುವುದಾದರೆ ಸರಿಸುಮಾರು 18.52 ಕೋಟಿ ರೂಪಾಯಿ.

ವಿನ್ನರ್

ರನ್ನರ್‌ ಅಪ್‌ ಆದವರಿಗೆ 19 ಲಕ್ಷ ಆಸ್ಟ್ರೇಲಿಯನ್‌ ಡಾಲರ್‌ ನಗದು ಬಹುಮಾನ ಸಿಗಲಿದೆ. ಅಂದರೆ 10.05 ಕೋಟಿ ರೂಪಾಯಿ.

ರನ್ನರ್‌ ಅಪ್‌

ಸೆಮಿಫೈನಲಿಸ್ಟ್‌ಗಳಿಗೆ 11 ಲಕ್ಷ ಆಸ್ಟ್ರೇಲಿಯನ್‌ ಡಾಲರ್ (5.82 ಕೋಟಿ ರೂ) ಕ್ವಾರ್ಟರ್‌ ಫೈನಲಿಸ್ಟ್‌ಗಳಿಗೆ 6.65 ಲಕ್ಷ ಡಾಲರ್ (3.51 ಕೋಟಿ ರೂ) ಬಹುಮಾನ ಸಿಗಲಿದೆ.

ಸೆಮಿಫೈನಲಿಸ್ಟ್‌

ನಾಲ್ಕನೇ ಸುತ್ತಿಗೆ ಪ್ರವೇಶಿಸಿದ ಆಟಗಾರರು 4.20 ಲಕ್ಷ ಡಾಲರ್‌ ಬಹುಮಾನ ಪಡೆದರೆ, ಮೂರನೇ ಸುತ್ತು ಪ್ರವೇಶಿಸಿದವರು 2.90 ಲಕ್ಷ ಡಾಲರ್‌ ನಗದು ಬಹುಮಾನ ಪಡೆಯುತ್ತಾರೆ.

ಜಿಎಸ್‌ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು