ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೆಸ್ ಕಿಂಗ್ ಮ್ಯಾಗ್ನಸ್ ಕಾರ್ಲ್ಸೆನ್
By Prasanna Kumar P N
Jan 06, 2025
Hindustan Times
Kannada
ವಿಶ್ವದ ನಂಬರ್ 1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸೆನ್ ಅವರು ಗೆಳತಿ ಎಲ್ಲ ವಿಕ್ಟೋರಿಯಾ ಮಲೋನ್ (Ella Victoria Malone) ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ತವರೂರು ನಾರ್ವೆಯ ರಾಜಧಾನಿ ಓಸ್ಲೋದ ಪ್ರಸಿದ್ಧ ಹೋಲ್ಮೆನ್‌ಕೊಲೆನ್ ಚಾಪೆಲ್ ಚರ್ಚ್ನಲ್ಲಿ ಮದುವೆ ನಡೆಯಿತು. ತಮ್ಮ ಕುಟುಂಬಸ್ಥರು ಮತ್ತು ಆಪ್ತರು ಭಾಗವಹಿಸಿದ್ದರು.
ಮದುವೆಯ ನಂತರ ಕಾರ್ಲ್ಸೆನ್ ಮತ್ತು ಮಲೋನ್ ಫೈವ್ಸ್ಟಾರ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ರಿಸೆಪ್ಷನ್ ಆಯೋಜಿಸಿದ್ದರು.
ಕಳೆದ ವರ್ಷ ಜರ್ಮನಿಯಲ್ಲಿ ನಡೆದ ಫ್ರೀಸ್ಟೈಲ್ ಚೆಸ್ ಚಾಲೆಂಜರ್ ಈವೆಂಟ್‌ನಲ್ಲಿ ಈ ಜೋಡಿ ತಮ್ಮ ರಿಲೇಷನ್ಶಿಪ್ ಅನ್ನು ಬಹಿರಂಗ ಮಾಡಿದ್ದರು.
ಅಂದಿನಿಂದ ವಿವಿಧ ಕಾರ್ಯಕ್ರಮಗಳಲ್ಲಿ ಈ ದಂಪತಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಚೆಸ್ ಟೂರ್ನಿಗಳಲ್ಲಿ ಕಾರ್ಲ್ಸೆನ್ರನ್ನು ಮಲೋನ್ ಬೆಂಬಲಿಸುತ್ತಿದ್ದರು.
chess.com ಪ್ರಕಾರ, ನಾರ್ವೆ ಚೆಸ್ ಆಟಗಾರರಾದ ಜೋಹಾನ್ಸ್ ಕ್ವಿಸ್ಲಾ, ಆಸ್ಕಿಲ್ಡ್ ಬ್ರೈನ್, ಜಿಎಂ ಪೀಟರ್ ಹೈನ್ ನೀಲ್ಸನ್ ಮತ್ತು ಜಿಎಂ ಜಾನ್ ಲುಡ್ವಿಗ್ ಹ್ಯಾಮರ್ ಭಾಗವಹಿಸಿದ್ದರು.
26 ವರ್ಷದ ಎಲ್ಲ ವಿಕ್ಟೋರಿಯಾ ಅವರ ತಾಯಿ ನಾರ್ವೆದವರು. ತಂದೆ ಅಮೆರಿಕ. ತಮ್ಮ ತಂದೆ ತಾಯಿಯೂ ಪ್ರೀತಿಸಿ ಮದುವೆಯಾಗಿದ್ದರು. ಮಲೋನ್ ಅವರು ಭಾಗಶಃ ಬೆಳೆದಿದ್ದೆಲ್ಲಾ ಓಸ್ಲೋದಲ್ಲಿ.
ಯುಎಸ್ನಲ್ಲಿ ಅಧ್ಯಯನ ಮಾಡಿದ್ದರೂ ಸಿಂಗಾಪುರದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಅವರು ಶಾಶ್ವತ ನಿವಾಸಿಯಾಗಿದ್ದಾರೆ.
ವಿಶ್ವ ಶ್ರೇಷ್ಠ ಚೆಸ್ ಆಟಗಾರರಲ್ಲಿ ಒಬ್ಬರಾದ ಕಾರ್ಲ್ಸೆನ್ ಐದು ವಿಶ್ವ ಚೆಸ್ ಚಾಂಪಿಯನ್‌ಶಿಪ್ ಸೇರಿ ವಿವಿಧ ಮಹತ್ವದ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ರಿಷಭ್ ಪಂತ್, ಏನದು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ