ದುಬಾರಿ ಖಾಸಗಿ ಜೆಟ್ ಖರೀದಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

By Jayaraj
Jan 13, 2025

Hindustan Times
Kannada

ವಿಶ್ವದಲ್ಲೇ ಅತಿ ಹೆಚ್ಚು ಫಾಲೊವರ್‌ಗಳನ್ನು ಹೊಂದಿರುವ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ. ಈಗ ಇವರು ಹೊಸ ವಿಷಯವಾಗಿ ಸುದ್ದಿಯಲ್ಲಿದ್ದಾರೆ.

ಅತಿ ಹೆಚ್ಚು ಫಾಲೊವರ್ಸ್

ಕೆಲವು ತಿಂಗಳ ಹಿಂದಷ್ಟೇ, ತಾವು 2015ರಲ್ಲಿ ಖರೀದಿಸಿದ್ದ ಗಲ್ಫ್‌ಸ್ಟ್ರೀಮ್ ಜಿ200 ಖಾಸಗಿ ಜೆಟ್‌ ಅನ್ನು ರೊನಾಲ್ಡೊ ಮಾರಾಟ ಮಾಡಿದ್ದರು.

ಗಲ್ಫ್‌ಸ್ಟ್ರೀಮ್ ಜಿ200

ಈಗ ಅವರು ಹೊಸ ಹಾಗೂ ದುಬಾರಿ ಬೆಲೆಯ ಖಾಸಗಿ ಜೆಟ್ ಅನ್ನು ಖರೀದಿಸಿದ್ದಾರೆ. ಇದು ಬೊಂಬಾರ್ಡಿಯರ್ ಗ್ಲೋಬಲ್ ಎಕ್ಸ್‌ಪ್ರೆಸ್ 6500 ಮಾಡಲ್.

ಗ್ಲೋಬಲ್ ಎಕ್ಸ್‌ಪ್ರೆಸ್ 6500

ಇದೀಗ ಲ್ಯಾಪ್‌ಲ್ಯಾಂಡ್‌ನಿಂದ ಸೌದಿ ಅರೇಬಿಯಾಕ್ಕೆ ಈ ದುಬಾರಿ ಖಾಸಗಿ ಜೆಟ್‌ನಲ್ಲಿ ಹಾರಿದ್ದಾರೆ.

ರೊನಾಲ್ಡೊ ಅವರ ಹೊಸ ಜೆಟ್‌ನಲ್ಲಿ 17 ಪ್ರಯಾಣಿಕರು ಪ್ರಯಾಣಿಸಬಹುದು. ಇದರಲ್ಲಿ ರೊನಾಲ್ಡೊ ಗೋಲನ್ನು ಆಚರಿಸುವ ಫೋಟೋ ಕೂಡಾ ಇದೆ.

17 ಪ್ರಯಾಣಿಕರು

ಈ ಜೆಟ್ ಗಂಟೆಗೆ 610 ಮೈಲಿ ವೇಗದಲ್ಲಿ ಹೋಗಬಲ್ಲದು ಎಂದು ವರದಿಯಾಗಿದೆ.

ಖಾಸಗಿ ಜೆಟ್‌ ಬೆಲೆ 40ರಿಂದ 50 ಮಿಲಿಯನ್ ಯುರೋಗಳು ಎಂದು ವರದಿಯಾಗಿದೆ. 

ಅಂದರೆ ರೂಪಾಯಿ ಮೌಲ್ಯದಲ್ಲಿ ಹೇಳುವುದಾದರೆ ಸರಿಸುಮಾರು 440 ಕೋಟಿ ರೂಪಾಯಿ.

ದುಬಾರಿ ಬೆಲೆ

Photo: AFP File

ಅತಿ ಹೆಚ್ಚು ಸಿಕ್ಸರ್​ ಸಿಡಿಸಿದವರು, ರೋಹಿತ್​ 2ನೇ ಸ್ಥಾನಕ್ಕೆ ಜಿಗಿತ!