ಖೇಲ್ ರತ್ನ ಪ್ರಶಸ್ತಿ ವೈಶಿಷ್ಟ್ಯಗಳೇನು; ಪುರಸ್ಕೃತರಿಗೆ ಕೊಡುವ ಮೊತ್ತವೆಷ್ಟು?

By Jayaraj
Dec 27, 2024

Hindustan Times
Kannada

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯು ಭಾರತದಲ್ಲಿ ಕ್ರೀಡಾ ಕ್ಷೇತ್ರದ ಸಾಧಕರಿಗೆ ಕೊಡಮಾಡುವ ಅತ್ಯುನ್ನತ ಗೌರವವಾಗಿದೆ.

ಇದನ್ನು ಮೊದಲು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದು ಕರೆಯಲಾಗುತ್ತಿತ್ತು.

ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದ ಆಟಗಾರರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪತ್ರ, ಪದಕದ ಜೊತೆಗೆ 25 ಲಕ್ಷ ರೂಪಾಯಿ ನಗದು ನೀಡಲಾಗುತ್ತದೆ.

2020ರವರೆಗೆ ಖೇಲ್ ರತ್ನ ಪ್ರಶಸ್ತಿ ಪಡೆದ ಆಟಗಾರರಿಗೆ 7.5 ಲಕ್ಷ ರೂ. ನೀಡಲಾಗುತ್ತಿತ್ತು.

2020ರ ನಂತರ ಆಟಗಾರರ ಹೆಚ್ಚುತ್ತಿರುವ ಅಗತ್ಯತೆಗಳು ಮತ್ತು ಅವರ ಸಮರ್ಪಣೆಯನ್ನು ಗಮನದಲ್ಲಿಟ್ಟುಕೊಂಡು ಅದನ್ನು 25 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಕ್ರೀಡೆಯಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುವ ಮತ್ತು ದೇಶದ ಯುವಜನರಿಗೆ ಸ್ಫೂರ್ತಿ ತುಂಬುವುದು ಖೇಲ್ ರತ್ನ ಪ್ರಶಸ್ತಿ ನೀಡುವ ಮುಖ್ಯ ಉದ್ದೇಶ.

ನಗದು ಬಹುಮಾನ ನೀಡುವ ಉದ್ದೇಶವು, ಆಟಗಾರರಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ ಮುಂದಿನ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಪ್ರೋತ್ಸಾಹಿಸುವುದು.

ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸುವುದು ಕ್ರೀಡಾಪಟುವಿನ ಪಾಲಿಗೆ ಒಂದು ಪ್ರಮುಖ ಸಾಧನೆಯಾಗಿದೆ. ಆ ಮೂಲಕ ಅವರ ಕಠಿಣ ಪರಿಶ್ರಮವನ್ನು ಗೌರವಿಸಲಾಗುತ್ತದೆ.

Photos: Instagram/Social media

ಶ್ರೀಲಂಕಾ ವಿರುದ್ಧ ಭಾರತದ 317 ರನ್‌ ಗೆಲುವಿಗೆ 2 ವರ್ಷ

AFP