ಎರಡು ಕಂಚು ಗೆದ್ದ ಮನು ಭಾಕರ್​​ಗೆ ಸರ್ಕಾರ ಖರ್ಚು ಮಾಡಿದ್ದೆಷ್ಟು?

By Prasanna Kumar P N
Aug 06, 2024

Hindustan Times
Kannada

ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತದ ಶೂಟಿಂಗ್ ರಾಣಿ ಎರಡು ಕಂಚಿನ ಪದಕಗಳನ್ನು ಗೆದ್ದು ದಾಖಲೆ ಬರೆದಿದ್ದಾರೆ.

ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ (ಸರಬ್ಜೋತ್ ಸಿಂಗ್ ಅವರೊಂದಿಗೆ ಸೇರಿ) ಕಂಚಿನ ಪದಕ ಗೆದ್ದಿದ್ದಾರೆ. 

ತಾನು ಸ್ಪರ್ಧಿಸಿದ್ದ ಮೂರರ ಪೈಕಿ 2ರಲ್ಲಿ ಪದಕ ಜಯಿಸಿದ್ದು, ಮತ್ತೊಂದರಲ್ಲಿ 4ನೇ ಸ್ಥಾನ ಪಡೆದರು. 25 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಪದಕದ ಕನಸು ಭಗ್ನಗೊಂಡಿತು.

ಭಾರತಕ್ಕಾಗಿ 2 ಪದಕ ಗೆದ್ದಿರುವ ಮನು ಭಾಕರ್ ಅವರಿಗೆ ಒಲಿಂಪಿಕ್ಸ್ ತರಬೇತಿಗಾಗಿ ಭಾರತದ ಕ್ರೀಡಾ ಸಚಿವಾಲಯ ಬರೋಬ್ಬರಿ ಎರಡು ಕೋಟಿ ರೂಪಾಯಿಗೂ ಅಧಿಕ ಖರ್ಚು ಮಾಡಿದೆ. 

ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್‌‌ ನಲ್ಲಿ ಮನು ಅವರಿಗೆ ತರಬೇತಿ ಕೊಡಿಸಲಾಗಿದೆ. ವಿಶ್ವ ಮಟ್ಟದ ತರಬೇತಿ ಪಡೆಯುವ ಮೂಲಕ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.

ಬೆಳಿಗ್ಗೆ ಏಳಲು ಇದೇ ಸರಿಯಾದ ಸಮಯ, ಇಲ್ಲವಾದರೆ ಅಪಾಯ