ಕಂಚಿನ ಪದಕ ಗೆದ್ದ ಹಾಕಿ ಆಟಗಾರರಿಗೆ ಭರ್ಜರಿ ಬಹುಮಾನ ಘೋಷಣೆ 

By Jayaraj
Aug 09, 2024

Hindustan Times
Kannada

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದಿತು.

ಸ್ಪೇನ್‌ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿದ ಭಾರತ, ಸತತ ಒಲಿಂಪಿಕ್ಸ್‌ ಪದಕ ಗೆದ್ದ ಸಾಧನೆ ಮಾಡಿತು.

ಐತಿಹಾಸಿಕ ಸಾಧನೆ ಬೆನ್ನಲ್ಲೇ ಹಾಕಿ ತಂಡದ ಪ್ರತಿಯೊಬ್ಬ ಆಟಗಾರನಿಗೆ ಹಾಕಿ ಇಂಡಿಯಾ ಭರ್ಜರಿ ಬಹುಮಾನ ಘೋಷಿಸಿದೆ.

ಪ್ರತಿ ಆಟಗಾರರಿಗೆ ತಲಾ 15 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಲಾಗಿದೆ.

ಇದೇ ವೇಳೆ ಸಹಾಯಕ ಸಿಬ್ಬಂದಿಗೆ ತಲಾ 7.7 ಲಕ್ಷ ರೂಪಾಯಿ ನಗದು ನೀಡಲಾಗುತ್ತದೆ.

ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ತಂಡದ ಐತಿಹಾಸಿಕ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.

ಪಿಆರ್‌ ಶ್ರೀಜೇಶ್‌ ಅವರು ಭಾರತ ತಂಡಕ್ಕೆ ಗೆಲುವಿನ ವಿದಾಯ ಹೇಳಿದ್ದಾರೆ.

All photos: PTI

ಕಿತ್ತಳೆ ಸಿಪ್ಪೆಗಳನ್ನು ಬಿಸಾಕಬೇಡಿ ಈ ರೀತಿ ಫೇಸ್‌ಪ್ಯಾಕ್ ಮಾಡಲು ಬಳಸಿ