ಒಲಿಂಪಿಕ್ಸ್ ಸಮಾರೋಪ ಸಮಾರಂಭ ಎಲ್ಲಿ, ಎಷ್ಟೊತ್ತಿಗೆ?

By Prasanna Kumar P N
Aug 11, 2024

Hindustan Times
Kannada

ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್​ಗೆ ಇಂದು (ಆಗಸ್ಟ್ 11) ಅದ್ಧೂರಿ ತೆರೆ ಬೀಳಲಿದೆ.

ಸಮಾರೋಪದಲ್ಲೂ ಹಲವಾರು ಕಾರ್ಯಕ್ರಮಗಳು ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಸಮಾರೋಪ ಸಮಾರಂಭವು ಸ್ಟೇಟ್ ಡಿ ಫ್ರಾನ್ಸ್​​ನಲ್ಲಿ ನಡೆಯಲಿದ್ದು, 100ಕ್ಕೂ ಅಧಿಕ ಕಾರ್ಯಕ್ರಮಗಳು ಜರುಗಲಿವೆ

Reuters

ಇಂದು ರಾತ್ರಿ 12.30ಕ್ಕೆ ಸಮಾರೋಪ ಪ್ರಾರಂಭವಾಗಲಿದ್ದು, 3 ಗಂಟೆಗಳ ಕಾಲ ನಡೆಯಲಿದೆ.

ಸಮಾರೋಪದಲ್ಲಿ ಪಿಆರ್ ಶ್ರೀಜೇಶ್ ಮತ್ತು ಶೂಟರ್ ಮನು ಭಾಕರ್ ಭಾರತದ ಧ್ವಜಧಾರಿಗಳಾಗಿ ಮುನ್ನಡೆಯಲಿದ್ದಾರೆ.

ಇಂದು ನಡೆಯುವ ಕೆಲವು ಸ್ಪರ್ಧೆಗಳ ಫೈನಲ್​ನಲ್ಲಿ ಗೆದ್ದವರಿಗೆ ಅಂತಿಮ ಪದಕ ಪ್ರದಾನ ನಡೆಯಲಿದೆ.

ಫ್ರಾನ್ಸ್ ನಗರದ ಮೇಯರ್ ಒಲಿಂಪಿಕ್ ಧ್ವಜವನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷರಿಗೆ ಹಸ್ತಾಂತರಿಸಲಿದ್ದಾರೆ.

ಸಮಾರೋಪ ಸಮಾರಂಭವನ್ನು ಜಿಯೊ ಸಿನಿಮಾ ಅಪ್ಲಿಕೇಷನ್ ಮತ್ತು ವೆಬ್​ಸೈಟ್​ನಲ್ಲಿ ನೋಡಬಹುದು. ಅದೇ ರೀತಿ ಸ್ಪೋರ್ಟ್ಸ್ 18 ಚಾನೆಲ್​ನಲ್ಲೂ ಈ ಕಾರ್ಯಕ್ರಮವನ್ನು ವೀಕ್ಷಿಸಬಹುದು.

ಹೆಣ್ಣಿಗೆ ಸೀರೆ ಯಾಕೆ ಅಂದ; ಶ್ರೇಯಾಂಕಾ ಅಂದ-ಚಂದ