ಪ್ಯಾರಿಸ್ ಒಲಿಂಪಿಕ್ಸ್ ಪದಕಗಳಲ್ಲಿ ಐಫೆಲ್ ಟವರ್ ಕಬ್ಬಿಣ

By Jayaraj
Jul 27, 2024

Hindustan Times
Kannada

ಪ್ಯಾರಿಸ್‌ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿವೆ. ಪ್ರೇಮನಗರಿ ಜಾಗತಿಕ ಕ್ರೀಡಾಪಟುಗಳ ಸ್ವಾಗತಕ್ಕೆ ಸಜ್ಜಾಗಿದೆ.

ಸಾಂಸ್ಕೃತಿಕವಾಗಿ ಶ್ರೀಮಂತ ಪರಂಪರೆ ಹೊಂದಿರು ಪ್ಯಾರಿಸ್‌ ಎಂದಾಗ ಮೊದಲು ನೆನಪಾಗುವುದೇ ನಗರದ ಐಫೆಲ್‌ ಟವರ್.‌

ಇದೀಗ ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಈ ಐತಿಹಾಸಿಕ ಐಫೆಲ್‌ ಟವರ್‌ಗೂ ಭಾರಿ ನಂಟಿದೆ.

Reuters

ಒಲಿಂಪಿಕ್ಸ್‌ನಲ್ಲಿ ಈ ಬಾರಿ ಪದಕ ಗೆಲ್ಲುವ ಎಲ್ಲಾ ಕ್ರೀಡಾಪಟುಗಳು ತಮ್ಮೊಂದಿಗೆ ಐಫೆಲ್‌ ಟವರ್‌ನ ಕಬ್ಬಿಣವನ್ನು ಕೂಡಾ ತಮ್ಮೊಂದಿಗೆ ಕೊಂಡೊಯ್ಯಲಿದ್ದಾರೆ.

ವಿಜೇತರಿಗೆ ಕೊಡಮಾಡುವ ಪ್ರತಿ ಪದಕಗಳಲ್ಲೂ ತಲಾ 18 ಗ್ರಾಂನಂತೆ ಕಬ್ಬಿಣವಿದೆ. ಇದು ಐಫೆಲ್‌ ಟವರ್‌ನ ಕಬ್ಬಿಣ.

ಈ ಹಿಂದೆ ಟವರ್‌ ಅನ್ನು ನವೀಕರಣ ಮಾಡುವಾಗ ಹೆಚ್ಚುವರಿ ಕಬ್ಬಿಣವನ್ನು ಸಂಗ್ರಹಿಸಿತ್ತು. ಅದನ್ನು ಈಗ ಮೆಡಲ್‌ಗಳಿಗೆ ಬಳಸಲಾಗಿದೆ.

ಈ ಬಾರಿಯ ಒಲಿಂಪಿಕ್ಸ್‌ಗಾಗಿ ಒಟ್ಟು 5084 ಮೆಡಲ್‌ಗಳನ್ನು ತಯಾರಿಸಲಾಗಿದೆ. ಇದರಲ್ಲಿ ತಲಾ 18 ಗ್ರಾಂ ಕಬ್ಬಿಣವಿದೆ.

ಚಿನ್ನದ ಪದಕವು ಒಟ್ಟು 529 ಗ್ರಾಮ ತೂಕವಿರಲಿದೆ. ಇದರಲ್ಲಿ 6 ಗ್ರಾಂ ಮಾತ್ರವೇ ಚಿನ್ನದ ಲೇಪನ ಇರುತ್ತದೆ.

ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಪಂದ್ಯವಾಡಿದ ಕ್ರಿಕೆಟಿಗರು