ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸಂಸತ್ ಸದಸ್ಯ

By Jayaraj
Aug 12, 2024

Hindustan Times
Kannada

ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತೆರೆ ಬಿದ್ದಿದೆ. ಕ್ರೀಡಾಕೂಟದಲ್ಲಿ ಸಂಸತ್ ಸದಸ್ಯರೊಬ್ಬರು ಪದಕ ಗೆದ್ದು ಗಮನ ಸೆಳೆದಿದ್ದಾರೆ.

ಉಕ್ರೇನ್‌ ಕುಸ್ತಿಪಟು ಝಾನ್ ಬೆಲೆನಿಯುಕ್, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಪದಕ ಗೆದ್ದ ಬೆನ್ನಲ್ಲೇ ಬೆಲೆನಿಯುಕ್ ಕ್ರೀಡೆಗೆ ನಿವೃತ್ತಿ ಘೋಷಿಸಿದ್ದಾರೆ.

ಬೆಲೆನಿಯುಕ್ 2019ರಲ್ಲಿ ಉಕ್ರೇನ್ ಸಂಸತ್ತಿನಲ್ಲಿ ಮೊದಲ ಕಪ್ಪು ಸದಸ್ಯರಾದರು.

ಬೆಲೆನಿಯುಕ್ ಮೂರು ಬಾರಿ ಒಲಿಂಪಿಕ್ ಪದಕ ಗೆದ್ದಿದ್ದಾರೆ. 

2019ರಲ್ಲಿ ನಡೆದ ಉಕ್ರೇನ್ ಸಂಸತ್ತಿನ ಚುನಾವಣೆಯಲ್ಲಿ, ಬೆಲೆನುಯಿಕ್ ಸರ್ವೆಂಟ್ ಆಫ್ ಪೀಪಲ್ ರಾಜಕೀಯ ಪಕ್ಷದ ಸದಸ್ಯರಾಗಿ ಆಯ್ಕೆಯಾದರು.

ಬೆಲೆನುಯಿಕ್ ಎರಡು ಬಾರಿ ವಿಶ್ವ ಕುಸ್ತಿ ಚಾಂಪಿಯನ್ ಕೂಡಾ ಆಗಿದ್ದಾರೆ.

ಕುಸ್ತಿ ಹೊರತಾಗಿ, ಬೆಲೆನಿಯುಕ್ ಉಕ್ರೇನ್‌ನ ರಾಷ್ಟ್ರೀಯ ಒಲಿಂಪಿಕ್ ಸಮಿತಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

All photos: AFP

ಮದುವೆಯಾದ 3 ವರ್ಷಕ್ಕೇ ದಾಂಪತ್ಯ ನೀರಸ ಅನ್ನಿಸ್ತಿದ್ರೆ ಈ ಟಿಪ್ಸ್‌ ಮಿಸ್ ಮಾಡದೆ ಫಾಲೊ ಮಾಡಿ 

Pexel