ಒಲಿಂಪಿಕ್ ವಿಜೇತರು ಪದಕಕ್ಕೆ ಕಚ್ಚುವುದು ಯಾಕೆ?

AP

By Jayaraj
Jul 24, 2024

Hindustan Times
Kannada

ಪ್ಯಾರಿಸ್‌ನಲ್ಲಿ 2024ರ ಒಲಿಂಪಿಕ್ಸ್ ಆರಂಭವಾಗುತ್ತಿದೆ. ಚತುರ್ವಾರ್ಷಿಕ ಕ್ರೀಡಾಕೂಟದಲ್ಲಿ ಜಾಗತಿಕ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.

AFP

ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆಲ್ಲುವ ಆಟಗಾರರು, ಪೋಡಿಯಂ ಮೇಲೆ ತಮ್ಮ ಪದಕಗಳಿಗೆ ಕಚ್ಚುವುದನ್ನು ನೋಡಿರುತ್ತೀರಿ.

AP

ವಿಜೇತರು ಯಾಕೆ ಹೀಗೆ ಪದಕಕ್ಕೆ ಕಚ್ಚುತ್ತಾರೆ ಎಂದು ನಿಮಗೆ ಗೊತ್ತಾ? ಇದಕ್ಕೂ ಕಾರಣವಿದೆ.

AP

ಹಿಂದೆ, ಒಲಿಂಪಿಕ್ಸ್‌ ಪದಕಗಳನ್ನು ಬೆಲೆಬಾಳುವ ಅಮೂಲ್ಯ ಲೋಹಗಳಿಂದ ತಯಾರಿಸಲಾಗುತ್ತಿತ್ತು.

AP

ಆಗ ಆಟಗಾರರು ಗೆದ್ದ ಪದಕದ ನೈಜ ಗುಣಮಟ್ಟ ದೃಢೀಕರಣಕ್ಕಾಗಿ ಕಚ್ಚಿ ನೋಡುತ್ತಿದ್ದರು.

AP

ಮುಖ್ಯವಾಗಿ ಚಿನ್ನದ ಪದಕಗಳನ್ನು ಪರಿಶೀಲಿಸುವ ತಂತ್ರ ಇದಾಗಿತ್ತು. ಅಸಲಿ ಚಿನ್ನದ ಪದಕದ ಮೇಲೆ ಹಲ್ಲಿನ ಗುರುತು ಬೀಳುತ್ತಿತ್ತು.

AP

ಆದರೆ, ಆಧುನಿಕ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕದ ಮೇಲೆ ಚಿನ್ನದ ಲೇಪನ ಹಚ್ಚಿ ಚಿನ್ನದ ಪದಕ ಮಾಡಲಾಗುತ್ತದೆ. ಇದು ಗಟ್ಟಿಯಾಗಿದ್ದು, ಕಚ್ಚಿದರೂ ಹಲ್ಲಿನ ಗುರುತು ಬೀಳುವುದಿಲ್ಲ.

ಈಗ ಕಚ್ಚುವುದರ ಹಿಂದೆ ಯಾವುದೇ ತಂತ್ರವಿಲ್ಲ. ಇದು ಪದಕ ಗೆದ್ದ ಖುಷಿಗೆ ಆಟಗಾರರು ಸಾಮಾನ್ಯ ಒಂದು ಅಭ್ಯಾಸವಾಗಿ ಮಾಡುತ್ತಾರೆ.

AP

ಪದಕ ಗೆಲ್ಲುವ ಕನಸನ್ನು ನನಸಾಗಿಸಿ ಮಹತ್ವದ ಸಾಧನೆ ಮಾಡಿದ ಖುಷಿಗಾಗಿ ಈಗ ಆಟಗಾರರು ಪದಕಕ್ಕೆ ಕಚ್ಚುತ್ತಾರೆ.

AP

ಅತಿ ಹೆಚ್ಚು ಬಾರಿ ಡಕೌಟ್, ರೋಹಿತ್ ಶರ್ಮಾ ನಂಬರ್ ವನ್‌