ನೀನು ಚಾಂಪಿಯನ್; ವಿನೇಶ್​ಗೆ ಮೋದಿ ಸಾಂತ್ವನ

By Prasanna Kumar P N
Aug 07, 2024

Hindustan Times
Kannada

ಪ್ಯಾರಿಸ್ ಒಲಿಂಪಿಕ್ಸ್​​​ನಲ್ಲಿ ಭಾರತದ ಸ್ಟಾರ್​ ಕುಸ್ತಿಪಟು ವಿನೇಶ್ ಫೋಗಾಟ್ 50 ಕೆಜಿ ಕುಸ್ತಿ ವಿಭಾಗದ ಫೈನಲ್​ಗೆ ಅನರ್ಹರಾಗಿದ್ದಾರೆ.

100 ಗ್ರಾಂ ತೂಕ ಹೆಚ್ಚಿರುವ ಕಾರಣ ವಿನೇಶ್​ರನ್ನು ಅನರ್ಹ ಮಾಡಲಾಗಿದ್ದು, ಭಾರತಕ್ಕೆ ಚಿನ್ನದ ಪದಕ ಕೈತಪ್ಪಿದಂತಾಗಿದೆ.

ಇದರ ಬೆನ್ನಲ್ಲೇ ನರೇಂದ್ರ ಮೋದಿ ಎಕ್ಸ್​ನಲ್ಲಿ ಪೋಸ್ಟ್​ನಲ್ಲಿ ಭಾರತದ ಕುಸ್ತಿಪಟಿಗೆ ಸಾಂತ್ವನ ಹೇಳಿದ್ದಾರೆ.

ವಿನೇಶ್ ಚಾಂಪಿಯನ್​ಗಳಲ್ಲಿ ಚಾಂಪಿಯನ್. ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ ಎಂದು ಹೇಳಿದ್ದಾರೆ.

ಸವಾಲು ಎದುರಿಸುವುದು ಯಾವಾಗಲೂ ನಿಮ್ಮ ಸ್ವಭಾವವಾಗಿದೆ. ಬಲವಾಗಿ ಹಿಂತಿರುಗಿ! ನಾವೆಲ್ಲರೂ ನಿಮ್ಮೊಂದಿಗಿದ್ದೇವೆ ಎಂದಿದ್ದಾರೆ.

ನೀವು ಆಹಾರ ಪ್ರಿಯರಾಗಿದ್ದರೆ ಈ ಹಪ್ಪಳಗಳನ್ನು ಪ್ರಯತ್ನಿಸಲೇಬೇಕು