ಒಲಿಂಪಿಕ್ಸ್ ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರವಾಗಿದ್ದು ಯಾವಾಗ?

By Prasanna Kumar P N
Jul 23, 2024

Hindustan Times
Kannada

ಪ್ಯಾರಿಸ್ ಒಲಿಂಪಿಕ್ಸ್ 2024ರ ಕ್ರೀಡಾಕೂಟಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ಹಿಂದಿಗಿಂತಲೂ ದಾಖಲೆ ವೀವ್ಸ್ ಪಡೆಯುವ ನಿರೀಕ್ಷೆ ಇದೆ.

ಭಾರತದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಅನ್ನು ಸಂಪೂರ್ಣ​ ಉಚಿತವಾಗಿ ಪ್ರಸಾರವಾಗಲಿದೆ. ಜಿಯೋ ಸಿನಿಮಾ ಪ್ರಸಾರದ ಹಕ್ಕನ್ನು ಪಡೆದಿದೆ.

ಆದರೆ 128 ವರ್ಷಗಳ ಕ್ರೀಡಾಕೂಟದ ಇತಿಹಾಸದಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್ ಟಿವಿಯಲ್ಲಿ ಪ್ರಸಾರಗೊಂಡಿದ್ದು ಯಾವಾಗ? 

ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರಗೊಂಡ ಒಲಿಂಪಿಕ್ಸ್​ಗೆ ಆತಿಥ್ಯ ವಹಿಸಿದ್ದ ದೇಶ ಯಾವುದು? ಇಲ್ಲಿದೆ ವಿವರ.

1936ರಲ್ಲಿ ಜರ್ಮನಿಯ ಬರ್ಲಿನ್ ಒಲಿಂಪಿಕ್ಸ್ ಮೊದಲ ಬಾರಿಗೆ ಟೆಲಿವಿಷನ್​​ನಲ್ಲಿ ಪ್ರಸಾರಗೊಂಡಿತ್ತು. ಅಂದು ಟಿವಿ ಹಾಲ್​​​ಗಳಲ್ಲಿ ಮಾತ್ರ ಪ್ರಸಾರ ಮಾಡಲಾಗಿತ್ತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರಗೊಂಡಿದ್ದು 1964ರ ಟೊಕಿಯೊ ಒಲಿಂಪಿಕ್ಸ್​​ನಿಂದ.

ಮಹಾ ಶಿವರಾತ್ರಿ ಶುಭಾಶಯಗಳು