ಪ್ರೊ ಕಬಡ್ಡಿ ಲೀಗ್‌ನಲ್ಲಿ ಪರ್ದೀಪ್ ನರ್ವಾಲ್ ಹೊಸ ಮೈಲಿಗಲ್ಲು

By Jayaraj
Dec 25, 2024

Hindustan Times
Kannada

ಬೆಂಗಳೂರು ಬುಲ್ಸ್ ತಂಡದ ರೈಡರ್ ಪರ್ದೀಪ್ ನರ್ವಾಲ್ ಪಿಕೆಎಲ್‌ನಲ್ಲಿ ವಿಶೇಷ ಮೈಲಿಗಲ್ಲು ತಲುಪಿದ್ದಾರೆ.

ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ 1800 ರೇಡ್ ಪಾಯಿಂಟ್‌ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಈ ಹಿಂದೆ ಪಟ್ನಾ ಪೈರೇಟ್ಸ್‌ ಯಶಸ್ಸಿನಲ್ಲಿ ಭಾಗಿಯಾಗಿದ್ದ ಅವರು, ಟೂರ್ನಿ ಇತಿಹಾಸದ ಅತ್ಯಂತ ಯಶಸ್ವಿ ಆಟಗಾರರಾಗಿದ್ದಾರೆ.

ಈ ಬಾರಿ ಬೆಂಗಳೂರು ಬುಲ್ಸ್‌ ಪರ ಆಡುತ್ತಿರುವ ಪರ್ದೀಪ್‌, ನಿರೀಕ್ಷೆಯಂಥಾ ಯಶಸ್ಸು ಗಳಿಸಿಲ್ಲ.

191 ಪಂದ್ಯಗಳಲ್ಲಿ ಆಡಿರುವ ಪರ್ದೀಪ್‌ 1800 ರೈಡ್‌ ಪಾಯಿಂಟ್‌ ಗಳಿಸಿದ್ದಾರೆ.

ಬೆಂಗಾಲ್ ವಾರಿಯರ್ಜ್‌ ತಂಡದ ಮಣಿಂದರ್ ಸಿಂಗ್ 1528 ಅಂಕಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ತೆಲುಗು ಟೈಟಾನ್ಸ್ ನಾಯಕ ಪವನ್ ಸೆಹ್ರಾವತ್ 1318 ರೈಡ್ ಪಾಯಿಂಟ್‌ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಬೆಂಗಳೂರು ಬುಲ್ಸ್‌ ತಂಡ ಪಿಕೆಎಲ್‌ 11ರ ಆವೃತ್ತಿಯಿಂದ ಹೊರಬಿದ್ದಿದೆ.

Instagram

ಸೀರೆಯುಟ್ಟು ಭರತನಾಟ್ಯ ಭಂಗಿಯಲ್ಲಿ ಫೋಸ್‌ ಕೊಟ್ಟ ನಭಾ ನಟೇಶ್‌