ಕ್ಯಾಮೆರಾ ಒಡೆದು ಹಾಕಿದ ಡ್ಯಾನಿಲ್ ಮೆಡ್ವೆಡೆವ್‌ಗೆ 40 ಲಕ್ಷ ರೂ ದಂಡ

By Jayaraj
Jan 20, 2025

Hindustan Times
Kannada

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮೊದಲ 2 ಸುತ್ತುಗಳಲ್ಲಿ ಕ್ಯಾಮೆರಾ ಮತ್ತು ರಾಕೆಟ್ ಒಡೆದು ಹಾಕಿದ ಡ್ಯಾನಿಲ್ ಮೆಡ್ವೆಡೆವ್‌ಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಲಾಗಿದೆ.

ಆಸ್ಟ್ರೇಲಿಯನ್ ಓಪನ್‌ 2 ಸುತ್ತಿನ ಬಳಿಕ ಮೆಡ್ವೆಡೆವ್‌ ನಿರ್ಗಮಿಸಿದರು. ಅದಾದ ಬೆನ್ನಲ್ಲೇ ಅವರಿಗೆ ದಂಡದ ಬಿಸಿ ಮುಟ್ಟಿದೆ.

ಒಟ್ಟು 76,000 ಆಸ್ಟ್ರೇಲಿಯನ್ ಡಾಲರ್ ದಂಡ ವಿಧಿಸಲಾಗಿದೆ. ಅಂದರೆ ಸರಿಸುಮಾರು 40 ಲಕ್ಷ ರೂಪಾಯಿ.

ಆಸ್ಟ್ರೇಲಿಯನ್ ಓಪನ್ ಸಂಘಟಕರು ಭಾನುವಾರ (ಜ.19) ದಂಡವನ್ನು ಪ್ರಕಟಿಸಿದ್ದಾರೆ.

ನೆಟ್‌ನಲ್ಲಿ ನೇತಾಡುತ್ತಿದ್ದ ಸಣ್ಣ ಕ್ಯಾಮೆರಾವನ್ನು ತನ್ನ ರಾಕೆಟ್‌ನಿಂದ ಪದೇ ಪದೇ ಹೊಡೆದು ನಾಶಪಡಿಸಿದ್ದರು. ಮೊದಲ ಸುತ್ತಿನ ಉಲ್ಲಂಘನೆಗಾಗಿ ಅವರಿಗೆ 10,000 ಡಾಲರ್ ದಂಡ ವಿಧಿಸಲಾಯಿತು.

ಎರಡನೇ ಸುತ್ತಿನಲ್ಲಿ ಮತ್ತೆ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ 66,000 ಡಾಲರ್ ದಂಡ ವಿಧಿಸಲಾಗಿದೆ. ಒಟ್ಟಾಗಿ 76,000 ಆಸ್ಟ್ರೇಲಿಯನ್‌ ಡಾಲರ್‌ ದಂಡ ಬಿದ್ದಿದೆ.

ರಷ್ಯಾ 28 ವರ್ಷದ ಟೆನ್ನಿಸ್‌ ಆಟಗಾರ, ಈ ಬಾರಿಯೂ ಆಸ್ಟ್ರೇಲಿಯಾ ಓಪನ್‌ ಗೆಲ್ಲಲು ಸಾಧ್ಯವಾಗಿಲ್ಲ.

AP

ಎರಡನೇ ಮಗುವಿನ ತಂದೆಯಾದ ಪ್ಯಾಟ್ ಕಮಿನ್ಸ್

File