WWEಯ 5 ಅತ್ಯಂತ ಎತ್ತರದ ರಸ್ಲರ್‌ಗಳು
By Jayaraj
Dec 09, 2024
Hindustan Times
Kannada
ವರ್ಲ್ಡ್ ರಸ್ಲಿಂಗ್ ಎಂಟರ್ಟೈನ್ಮೆಂಟ್ (WWE) ನೋಡುವ ಅಭಿಮಾನಿಗಳು ಪ್ರಪಂಚದಾದ್ಯಂತ ಇದ್ದಾರೆ.
WWE ಇತಿಹಾಸದಲ್ಲಿ ಅತ್ಯಂತ ಎತ್ತರದ ರಸ್ಲರ್‌ಗಳು ಯಾರ್ಯಾರು ಎಂಬುದನ್ನು ನೋಡೋಣ.
ಈ ಪಟ್ಟಿಯಲ್ಲಿ ಅರ್ಜೆಂಟೀನಾದ ಮಾಜಿ ಕುಸ್ತಿಪಟು ಜಾರ್ಜ್ ಗೊನ್ಜಾಲೆಜ್ ಮೊದಲ ಸ್ಥಾನದಲ್ಲಿದ್ದಾರೆ. ಗೊಂಜಾಲೆಜ್ ಎತ್ತರ 8 ಅಡಿ.
ಗೊಂಜಾಲೆಜ್ ಕೇವಲ ರಸ್ಲಿಂಗ್ ರಿಂಗ್‌ನಲ್ಲಿ ಮಾತ್ರವಲ್ಲದೆ ಬ್ಯಾಸ್ಕೆಟ್‌ಬಾಲ್ ಮತ್ತು ನಟನೆಯಲ್ಲಿಯೂ ಮಿಂಚಿದರು.
ಎರಡನೇ ಸ್ಥಾನದಲ್ಲಿ ಆಂಡ್ರೆ ದಿ ಜೈಂಟ್ ಇದ್ದಾರೆ. ಇವರ ಎತ್ತರ 7 ಅಡಿ 4 ಇಂಚು.
WWEನಲ್ಲಿ ಸ್ಪರ್ಧಿಸಿದಾಗ ಅವರ ತೂಕ 500 ಪೌಂಡ್. ಅವರ ಎತ್ತರ ಮತ್ತು ತೂಕ ನೋಡಿ ಎದುರಾಳಿಗಳು ನಡುಗುತ್ತಿದ್ದರು.
ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ಜನಿಸಿದ ಜಂಟಿ ಸಿಲ್ವಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಸಿಲ್ವಾ ಅವರ ಎತ್ತರ 7 ಅಡಿ 2 ಇಂಚು.
ಭಾರತದ ದಿ ಗ್ರೇಟ್ ಖಲಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಖಲಿಯ ಎತ್ತರ 7 ಅಡಿ 1 ಇಂಚು.
ಬಿಗ್ ಶೋ ಮತ್ತು ಕೇನ್ ಜಂಟಿಯಾಗಿ ಐದನೇ ಸ್ಥಾನದಲ್ಲಿದ್ದಾರೆ. ಇವೆರಿಬ್ಬರ ಎತ್ತರ 7 ಅಡಿ.
Social media
ಪುದೀನಾ ಚಹಾ ಕುಡಿಯುವುದರ 5 ಆರೋಗ್ಯ ಪ್ರಯೋಜನಗಳಿವು
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ