ಈ ಲಕ್ಷಣಗಳಿದ್ದರೆ ಸ್ತನ ಕ್ಯಾನ್ಸರ್ ಇರಬಹುದು ಎಚ್ಚರ
By Rakshitha Sowmya
Jun 29, 2024
Hindustan Times
Kannada
ಖ್ಯಾತ ಹಿಂದಿ ಕಿರುತೆರೆ ನಟಿ ಹೀನಾಖಾನ್ ತಾವು 3ನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ಇತ್ತೀಚೆಗೆ ಪೋಸ್ಟ್ ಹಂಚಿಕೊಂಡಿದ್ದರು
ಪ್ರತಿ ವರ್ಷ ಲಕ್ಷಾಂತರ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ, ಸೂಕ್ತ ಕಾಲಕ್ಕೆ ಚಿಕಿತ್ಸೆ ದೊರೆತರೆ ಈ ಸಮಸ್ಯೆಯಿಂದ ಹೊರ ಬರಬಹುದು
ನಿಮಗೆ ಈ ಲಕ್ಷಣಗಳು ಕಂಡು ಬಂದಲ್ಲಿ ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ವೈದ್ಯರ ಬಳಿ ಹೋಗಿ
ಎದೆಯಲ್ಲಿ ದೊಡ್ಡ ಗಂಟು ಇದ್ದು ಇದು ಕೆಲವೊಮ್ಮೆ ಚಲಿಸಬಹುದು, ಸ್ಥಿರವಾಗಿರಬಹುದು ಹಾಗೇ ಕೆಲವರಿಗೆ ಗಟ್ಟಿಯಾಗಿದ್ದರೆ ಕೆಲವರಿಗೆ ಮೃದುವಾಗಿರುತ್ತದೆ
ಸ್ತನಗಳಲ್ಲಿ ಆಗ್ಗಾಗ್ಗೆ ನೋವು ಉಂಟಾಗುವುದು, ಊತ ಇದ್ದರೆ ಅದು ಕೂಡಾ ಕ್ಯಾನ್ಸರ್‌ನ ಲಕ್ಷಣಗಳಿರಬಹುದು
ಎರಡು ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕಾಲ ಸ್ತನಗಳಲ್ಲಿ ನೋವು, ಊತ ಇದ್ದರೆ ತಪ್ಪದೆ ವೈದ್ಯರ ಬಳಿ ಹೋಗಬೇಕು
ಕ್ಯಾನ್ಸರ್ ಲಕ್ಷಣಗಳಿದ್ದರೆ ಸ್ತನದ ತೊಟ್ಟಿನಿಂದ ಕೀವು ಅಥವಾ ರಕ್ತ ಬರುವ ಸಾಧ್ಯತೆ ಹೆಚ್ಚು
ಸ್ತನಗಳು ಇದ್ದಕ್ಕಿದ್ದಂತೆ ಕೆಂಪಗಾದರೆ ಅದೂ ಕೂಡಾ ಬ್ರೆಸ್ಟ್ ಕ್ಯಾನ್ಸರ್ ಲಕ್ಷಣ ಇರಬಹುದು
ಈ ಹಂತದಲ್ಲಿ ಸ್ತನಗಳ ಗಾತ್ರ ಕುಗ್ಗಬಹುದು, ಕೆಲವರಿಗೆ ದೊಡ್ಡದಾಗಬಹುದು
ಆರಂಭಿಕ ಹಂತದಲ್ಲೇ ನೀವು ಸ್ತನ ಕ್ಯಾನ್ಸರ್ ಪತ್ತೆ ಹಚ್ಚಿದರೆ ಖಂಡಿತ ನೀವು ಈ ಸಮಸ್ಯೆಯಿಂದ ಪಾರಾಗಬಹುದು
ಇದು ಸಾಮಾನ್ಯ ಮಾಹಿತಿಯನ್ನು ಆಧರಿಸಿದ ಬರಹ, ಹೆಚ್ಚಿನ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸಿ
ಬ್ಲಾಕ್ ಡ್ರೆಸ್‌ನಲ್ಲಿ ನಿವೇದಿತಾ ಗೌಡ; ಇಲ್ಲಿವೆ ಫೋಟೋಸ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ