freepik
ವೇಳಾಪಟ್ಟಿ ರಚಿಸುವ ಮೂಲಕ ದಿನವನ್ನು ಯೋಜಿಸಿ. ಅಧ್ಯಯನದ ಸಮಯ, ವಿರಾಮ, ಇತರೆ ಚಟುವಟಿಕೆಗಳನ್ನು ಬರೆಯಿರಿ. ಪ್ರತಿದಿನ ಈ ವೇಳಾಪಟ್ಟಿಯನ್ನು ಅನುಸರಿಸಿ.
freepik
ತುರ್ತು ಮತ್ತು ಪ್ರಮುಖ ಕೆಲಸಗಳನ್ನು ಮೊದಲು ಗುರುತಿಸಿ. ಕೆಲಸದ ಹೊರೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪಟ್ಟಿ ಮಾಡಿರುವ ಕೆಲಸವನ್ನು ಒಂದೊಂದಾಗಿ ಮಾಡಿ.
freepik
25 ನಿಮಿಷಗಳ ಕಾಲ ಅಧ್ಯಯನ ಮಾಡಿ, ನಂತರ 5 ನಿಮಿಷ ವಿರಾಮ ತೆಗೆದುಕೊಳ್ಳಿ. ಇದು ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.
ಒಂದು ಸಮಯದಲ್ಲಿ ಒಂದು ವಿಚಾರದ ಮೇಲೆ ಮಾತ್ರ ಗಮನವಿರಲಿ. ಬೇರೆ-ಬೇರೆ ವಿಷಯದತ್ತ ಗಮನಹರಿಸಿದರೆ ಮನಸ್ಸು ವಿಚಲಿತಗೊಳ್ಳುತ್ತದೆ.
ಅಧ್ಯಯನ ಮಾಡುವ ಕೋಣೆ ಅಚ್ಚುಕಟ್ಟಾಗಿರಲಿ. ಗಾಳಿ, ಬೆಳಕು ಸರಿಯಾಗಿ ಬರುವಂತಹ ಕೋಣೆಯಲ್ಲಿ ಅಧ್ಯಯನ ಮಾಡಿ. ಆರಾಮದಾಯಕ ಕುರ್ಚಿಯಲ್ಲಿ ಕುಳಿತುಕೊಳ್ಳಿ.
freepik
ಅಧ್ಯಯನದ ವೇಳೆ ಮೊಬೈಲ್ ವೀಕ್ಷಣೆಯನ್ನು ಕಡಿಮೆ ಮಾಡಿ. ಮೊಬೈಲ್ ಬಳಸಿದರೆ ಓದುವುದರತ್ತ ಏಕಾಗ್ರತೆ ಕಡಿಮೆಯಾಗುತ್ತದೆ.
freepik
ಸಾಕಷ್ಟು ನಿದ್ದೆ ಮಾಡಿ, ಪೌಷ್ಟಿತ ಆಹಾರ ಸೇವಿಸಿ ಹಾಗೂ ನಿಯತವಾಗಿ ವ್ಯಾಯಾಮ ಮಾಡಿ. ನೀವು ಆರೋಗ್ಯವಂತರಾಗಿದ್ದರೆ ಮನಸ್ಸು ಕೂಡ ಸಕ್ರಿಯವಾಗಿರುತ್ತದೆ. ಇದರಿಂದ ಏಕಾಗ್ರತೆಗೆ ಭಂಗವಾಗುವುದಿಲ್ಲ.
freepik