ಮದುವೆಯ ಬಂಧ ಗಟ್ಟಿಯಾಗಿರಲು ಸುಧಾ ಮೂರ್ತಿಯವರ ಮೂರು ಚಿನ್ನದಂತಹ ಸಲಹೆಗಳು

Instagram

By HT Kannada Desk
Sep 05, 2024

Hindustan Times
Kannada

ಬಹಳಷ್ಟು ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿರುವ ಸುಧಾ ಮೂರ್ತಿಯವರು ಯುವಜನರಿಗೆ ಆಗಾಗ ಬೆಲೆಕಟ್ಟಲಾಗದ ಸಲಹೆಗಳನ್ನು ನೀಡುತ್ತಿರುತ್ತಾರೆ. ಸದ್ಯ ಅವರು ನೀಡಿರುವ ಒಂದು ಸಂದರ್ಶನದಲ್ಲಿ ದಾಂಪತ್ಯದ ಬಗ್ಗೆ ಮೂರು ಅಮೂಲ್ಯ ಸಲಹೆ ಹಂಚಿಕೊಂಡಿದ್ದಾರೆ.

Instagram

ಸಲಹೆ 1: ದಂಪತಿಗಳೆಂದ ಮೇಲೆ ಜಗಳ ಇದ್ದಿದ್ದೇ. ನಿಮಗೆ ಮದುವೆಯಾಗಿದೆ ಎಂದರೆ ಜಗಳವಾಡುವುದು ನಿಮ್ಮ ಹಕ್ಕಾಗಿದೆ. ನೀವು ಒಮ್ಮೆಯೂ ಜಗಳವಾಡಿಲ್ಲ ಎಂದಾದರೆ ನೀವು ಗಂಡ ಹೆಂಡತಿಯೇ ಅಲ್ಲ.

Instagram

ಪರ್ಫೆಕ್ಟ್‌ ಕಪಲ್‌ ಯಾರೂ ಇಲ್ಲ: ಜೀವನ ಅಂದ್ರೆ ಕೊಟ್ಟು ತೆಗೆದುಕೊಳ್ಳುವುದು. ಯಾರದ್ದೂ ಪರಿಪೂರ್ಣ ಜೀವನ, ಜೋಡಿ ಇಲ್ಲವೇ ಇಲ್ಲ. ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಕೊರತೆ ಇದ್ದೇ ಇರುತ್ತದೆ.

Instagram

ಸಲಹೆ 2: ಇಬ್ಬರೂ ಜಗಳವಾಡಿದ ಮೇಲೆ ಒಬ್ಬರು ಅಸಮಾಧಾನಗೊಂಡಿದ್ದರೆ, ಮತ್ತೊಬ್ಬರು ಸಮಾಧಾನವಹಿಸಿ. 

Instagram

ಒಬ್ಬರಿಗೊಬ್ಬರು ನೆರವಾಗಿ: ಸುಧಾ ಮೂರ್ತಿಯವರು ಇನ್ನೊಂದು ಸಲಹೆ ಎಂದರೆ ಹೆಚ್ಚಿನ ಮಹಿಳೆಯರು ಹೊರಗೆ ಕೆಲಸ ಮಾಡುವುದರಿಂದ ಮನೆಗೆಲಸದಲ್ಲಿ ಪರಸ್ಪರ ಸಹಾಯ ಮಾಡಿ. ಹೆಂಡತಿಯೇ ಎಲ್ಲವನ್ನೂ ಮಾಡಬೇಕೆಂದು ನಿರೀಕ್ಷಿಸಬಾರದು ಎಂದು ಪುರುಷರಿಗೆ ಕಿವಿಮಾತು ಹೇಳಿದ್ದಾರೆ.

Instagram

ಸಲಹೆ 3: ಹೆಂಡತಿಗೆ ಅಡುಗೆಮನೆಯಲ್ಲಿ ಖಂಡಿತ ಸಹಾಯ ಮಾಡಿ, ಇದು ಬಹಳ ಮುಖ್ಯವಾದದ್ದು ಎಂದು ಈ ಕಾಲದ ಪುರುಷರಿಗೆ ಚೆಂದದ ಸಲಹೆ ನೀಡಿದ್ದಾರೆ.

Instagram

ಸಂಸಾರ ಸುಖದಿಂದ ಸಾಗಲು ಪತ್ನಿಯ ಕೆಲಸಗಳನ್ನು ಗಂಡ ಹಂಚಿಕೊಳ್ಳಬೇಕು ಎಂಬುದು ಸುಧಾ ಮೂರ್ತಿಯವರು ನೀಡುವ ಮತ್ತೊಂದು ಸಲಹೆ.

Instagram

ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದರಿಂದ ಉಂಟಾಗುವ ಅಡ್ಡಪರಿಣಾಮಗಳಿವು

Pexels