ಈ ಬೇಸಿಗೆಯಲ್ಲಿ ಹೀಟ್ ಸ್ಟ್ರೋಕ್ ತಡೆಗಟ್ಟಲು 10 ಸಲಹೆಗಳು

Image Credits : Adobe Stock

By Priyanka Gowda
Mar 28, 2025

Hindustan Times
Kannada

ನಿಮ್ಮ ದೇಹವು ಅತಿಯಾಗಿ ಬಿಸಿಯಾದಾಗ ಮತ್ತು ತಂಪಾಗಿಸಲು ಸಾಧ್ಯವಾಗದಿದ್ದಾಗ ಹೀಟ್ ಸ್ಟ್ರೋಕ್ ಸಂಭವಿಸುತ್ತದೆ. ಶಾಖ ಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ತಂಪಾಗಿರಲು ಈ 10 ಸಲಹೆಗಳನ್ನು ಅನುಸರಿಸಿ. 

Image Credits : Adobe Stock

ಹೀಟ್ ಸ್ಟ್ರೋಕ್ ಅಪಾಯವು ಹೆಚ್ಚಿದ್ದಾಗ, ಅದನ್ನು ತಪ್ಪಿಸಲು ಹೈಡ್ರೇಟ್ ಆಗಿರುವುದು ತುಂಬಾ ಅವಶ್ಯಕ. ದಿನವಿಡೀ ಸಾಕಷ್ಟು ನೀರು ಕುಡಿಯಿರಿ. ನಿಂಬೆ, ಪುದೀನಾ ಅಥವಾ ಸೌತೆಕಾಯಿ ಜ್ಯೂಸ್ ಅನ್ನೂ ಕುಡಿಯಬಹುದು.

Image Credits : Adobe Stock

ಸೋಡಾಗಳಂತಹ ಕಾರ್ಬೊನೇಟೆಡ್ ಪಾನೀಯಗಳು ನಿಮ್ಮ ದೇಹವನ್ನು ನಿರ್ಜಲೀಕರಣಗೊಳಿಸಬಹುದು. ಹೈಡ್ರೇಟ್ ಆಗಿಡಲು ನೀರು, ಗಿಡಮೂಲಿಕೆ ಚಹಾ ಅಥವಾ ನೈಸರ್ಗಿಕ ಜ್ಯೂಸ್ ಕುಡಿಯುವುದು ಉತ್ತಮ.

Image Credits : Adobe Stock

ಎಣ್ಣೆಯುಕ್ತ ಅಥವಾ ಜಂಕ್ ಫುಡ್ ತಿನ್ನುವುದು ಜೀರ್ಣಿಸಿಕೊಳ್ಳಲು ಕಷ್ಟ. ಸಲಾಡ್, ಹಣ್ಣುಗಳು ಮತ್ತು ಧಾನ್ಯಗಳಂತಹ ಪೌಷ್ಟಿಕ ಆಹಾರವನ್ನು ಸೇವಿಸಿ.

Image Credits : Adobe Stock

ಸೌತೆಕಾಯಿ, ಕಲ್ಲಂಗಡಿ ಮತ್ತು ಮೊಸರನ್ನು ಸೇವಿಸುವುದರಿಂದ ದೇಹದ ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇವು ಹೆಚ್ಚಿನ ನೀರಿನ ಅಂಶ ಮತ್ತು ಅಗತ್ಯ ಪೋಷಕಾಂಶಗಳನ್ನು ಹೊಂದಿವೆ. 

Image Credits : Adobe Stock

ವಿಪರೀತ ಶಾಖದಲ್ಲಿ ವ್ಯಾಯಾಮ ಮಾಡುವುದರಿಂದ ದೇಹದ ಮೇಲೆ ಒತ್ತಡವನ್ನುಂಟು ಮಾಡುತ್ತದೆ ಮತ್ತು ಹೀಟ್ ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತದೆ. ಮುಂಜಾನೆ ಅಥವಾ ಸಂಜೆ ತಡವಾಗಿ ವ್ಯಾಯಾಮ ಮಾಡುವುದು ಒಳಿತು.

Image Credits : Adobe Stock

ಚರ್ಮವು ಉಸಿರಾಡಲು ಮತ್ತು ತಂಪಾಗಿರಲು ಅನುವು ಮಾಡಿಕೊಡುವ ಸಡಿಲವಾದ, ಹತ್ತಿ ಬಟ್ಟೆಗಳನ್ನು ಧರಿಸಿ.

Image Credits : Adobe Stock

ತಣ್ಣೀರಿನ ಸ್ನಾನವು ದೇಹದ ಶಾಖವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. 

Image Credits : Adobe Stock

ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ ಸೂರ್ಯನ ಬಿಸಿಲು ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಹೊರಗೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ.

Image Credits : Adobe Stock

ನೀವು ಎಸಿ ಕೋಣೆಯ ಒಳಗೆ ಇದ್ದರೆ, ಒಮ್ಮೆಲೆ ಬಿಸಿಲಿಗೆ ಹೋಗಬೇಡಿ. ನಿಧಾನವಾಗಿ ಶಾಖಕ್ಕೆ ಒಡ್ಡಿಕೊಳ್ಳಿ.

Image Credits : Adobe Stock

ಟೋಪಿ, ಸನ್‍ಗ್ಲಾಸ್ ಧರಿಸುವ ಮೂಲಕ ಅಥವಾ ಕೊಡೆಯನ್ನು ಕೊಂಡೊಯ್ಯುವ ಮೂಲಕ ನಿಮ್ಮ ತಲೆ ಮತ್ತು ಕಣ್ಣುಗಳನ್ನು ಸೂರ್ಯನಿಂದ ರಕ್ಷಿಸಿಕೊಳ್ಳಿ. ಇವು ಹಾನಿಕಾರಕ ಯುವಿ ಕಿರಣಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.

Image Credits : Adobe Stock

ವಿಷ್ಣು ಚಾಲೀಸವನ್ನು ಯಾವಾಗ, ಹೇಗೆ ಪಠಿಸಬೇಕು; ಏನೆಲ್ಲಾ ಪ್ರಯೋಜನಗಳಿವೆ