ದೇಹ ತಂಪಾಗಿಸುವ ಬೇಸಿಗೆ ಪಾನೀಯಗಳಿವು
Pinterest
By Priyanka Gowda
Apr 11, 2025
Hindustan Times
Kannada
ಬಿಸಿಲಿನ ತಾಪಮಾನ ದಿನೇ ದಿನೇ ಏರುತ್ತಿದೆ. ಕೆಲವೆಡೆ ಮಳೆಯಾಗುತ್ತಿದೆಯಾದರೂ ಬಿಸಿಲು ಹೆಚ್ಚುತ್ತಿದೆ. ಬಿಸಿಗಾಳಿ ಬೀಸುತ್ತಿದೆ.
Pinterest
ಈ ಬಿಸಿಲಿನಲ್ಲಿ ದೇಹ ತಂಪಾಗಿಸುವ ಕೆಲವು ತಾಜಾ ಪಾನೀಯಗಳು ಇಲ್ಲಿವೆ.
Unsplash
ಹಸಿ ಮಾವು, ಪುದೀನಾ ಮತ್ತು ಮಸಾಲೆಗಳಿಂದ ತಯಾರಿಸಲಾದ ಈ ಪಾನೀಯ ಬೇಸಿಗೆಗೆ ಸೇವಿಸಲು ಅತ್ಯುತ್ತಮ. ಇದು ದೇಹವನ್ನು ತಂಪಾಗಿರಿಸುತ್ತದೆ.
Pinterest
ಜಲ್ಜೀರಾ ಪಾನೀಯವನ್ನು ಹುರಿದ ಜೀರಿಗೆಯನ್ನು ಪುಡಿಮಾಡಿ ನೀರಿನೊಂದಿಗೆ ಬೆರೆಸಲಾಗುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವ ತಂಪು ಪಾನೀಯವಾಗಿದೆ.
Pinterest
ಸತ್ತು ಹಿಟ್ಟನ್ನು ನೀರು, ಸಕ್ಕರೆ ಮತ್ತು ಚಿಟಿಕೆ ಉಪ್ಪಿನೊಂದಿಗೆ ಮಿಶ್ರಣ ಮಾಡಿದರೆ ಸತ್ತು ಶರ್ಬತ್ತು ಸಿದ್ಧ. ಈ ಬಿಹಾರಿ ಪಾನೀಯವು ದೇಹವನ್ನು ತಂಪಾಗಿಸುತ್ತದೆ.
Pnterest
ಮೊಸರನ್ನು ಮಜ್ಜಿಗೆ ಮಾಡಿ ಅದಕ್ಕೆ ನೀರು, ಉಪ್ಪು ಮತ್ತು ಹುರಿದ ಜೀರಿಗೆಯನ್ನು ಮಿಶ್ರಣ ಮಾಡಿ ಕುಡಿದರೆ ದೇಹ ತಂಪಾಗುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
Pinterest
ಎಳನೀರು ನೈಸರ್ಗಿಕ ಸಿಹಿ ಹೊಂದಿದೆ ಮತ್ತು ದೇಹವನ್ನು ನಿರ್ಜಲೀಕರಣದಿಂದ ಕಾಪಾಡಲು ಸಹಕಾರಿಯಾಗಿದೆ.
Pinterest
ನಿಂಬೆ ಪಾನೀಯ ತಯಾರಿಸಲು ನಿಂಬೆ ರಸವನ್ನು ನೀರು, ಪುದೀನಾ, ಸಕ್ಕರೆ, ಉಪ್ಪು ಮತ್ತು ಚಿಟಿಕೆ ಜೀರಿಗೆ ಅಥವಾ ಕರಿಮೆಣಸಿನೊಂದಿಗೆ ಬೆರೆಸಿ ಕುಡಿಯಿರಿ.
Pinterest
ಕಲ್ಲಂಗಡಿ ಶರ್ಬತ್ತು ಮಾಡಲು ಕಲ್ಲಂಗಡಿ ಹಣ್ಣನ್ನು ಸಣ್ಣಗೆ ಕತ್ತರಿಸಿ ಮಿಶ್ರಣ ಮಾಡಿ. ಇದು ಬೇಸಿಗೆಗೆ ಸೂಕ್ತ ಪಾನೀಯವಾಗಿದೆ.
Pinterest
ಡಾ. ರಾಜ್‌ಕುಮಾರ್ ನಟಿಸಿದ ಪರಭಾಷೆಯ ಸಿನಿಮಾ ಯಾವುದು ಗೊತ್ತೆ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ