ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ 9 ತಾಜಾ ಹಣ್ಣುಗಳಿವು

Image Credits : Adobe Stock

By Priyanka Gowda
Apr 14, 2025

Hindustan Times
Kannada

ಬೇಸಿಗೆಯ ತಾಪಮಾನ ಹೆಚ್ಚಿರುವುದರಿಂದ ದೇಹವನ್ನು ತಂಪಾಗಿಸಿಡುವುದು ಅತ್ಯಗತ್ಯ. ದೇಹವನ್ನು ತಂಪಾಗಿಸಲು ಸಹಾಯ ಮಾಡುವ 9 ತಾಜಾ ಹಣ್ಣುಗಳು ಇಲ್ಲಿವೆ.

Image Credits : Adobe Stock

ಕಲ್ಲಂಗಡಿ ಹಣ್ಣಿನಲ್ಲಿ ಶೇ. 92 ರಷ್ಟು ನೀರಿನಿಂದ ತುಂಬಿದೆ. ಇದು ದೇಹವನ್ನು ತಂಪಾಗಿಸುತ್ತದೆ. ಇದರಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿದೆ. ಇದು ಚರ್ಮವನ್ನು ಆರೋಗ್ಯಕರವಾಗಿಸಲು ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.

Image Credits : Adobe Stock

ಕಿತ್ತಳೆ ವಿಟಮಿನ್ ಸಿ ಯಿಂದ ತುಂಬಿರುವ ರಸಭರಿತ ಹಣ್ಣು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

Image Credits : Adobe Stock

ಸೌತೆಕಾಯಿಯಲ್ಲಿ ನೀರಿನ ಅಂಶವಿದೆ. ಇದು ದೇಹವನ್ನು ತಂಪಾಗಿಸುತ್ತದೆ. 

Image Credits : Adobe Stock

ಸ್ಟ್ರಾಬೆರಿ, ಬ್ಲೂಬೆರ್ರಿ ಮತ್ತು ರಾಸ್ಬೆರ್ರಿ ಹಣ್ಣು ರುಚಿಕರ ಮಾತ್ರವಲ್ಲದೆ ಕಡಿಮೆ ಕ್ಯಾಲೊರಿಗಳನ್ನು ಹೊಂದಿವೆ. ಇವು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ.

Image Credits : Adobe Stock

ಎಳನೀರು ನೈಸರ್ಗಿಕ ಪಾನೀಯವಾಗಿದ್ದು, ಇದು ದೇಹವನ್ನು ಹೈಡ್ರೇಟ್ ಮತ್ತು ತಂಪಾಗಿಡಲು ಸಹಾಯ ಮಾಡುತ್ತದೆ. ಇದು ಬೇಸಿಗೆಯ ದಿನಗಳಲ್ಲಿ ಸೂಕ್ತವಾಗಿದೆ.

Image Credits : Pexels

ಖರ್ಬೂಜ ಹಣ್ಣು ಸಿಹಿ ಮತ್ತು ರಸಭರಿತ ಹಣ್ಣು. ಇದರಲ್ಲಿ ನೀರಿನಿಂಶವಿರುವುದರಿಂದ ದೇಹವನ್ನು ತಂಪಾಗಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.

Image Credits : Adobe Stock

ದಾಳಿಂಬೆ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಬೇಸಿಗೆಯ ದಿನಗಳಲ್ಲಿ ದೇಹವನ್ನು ತಂಪಾಗಿಸಲು ಮತ್ತು ಶಕ್ತಿಯನ್ನು ಹೆಚ್ಚಿಸಲು ಉತ್ತಮವಾಗಿವೆ. 

Image Credits : Adobe Stock

ಅನಾನಸ್ ಸಿಹಿಯಾಗಿದ್ದು, ದೇಹವನ್ನು ತಂಪಾಗಿಸುತ್ತದೆ. ಇದು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Image Credits : Adobe Stock

ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನಹಣ್ಣುಗಳು ರುಚಿಕರವಾಗಿರುತ್ತದೆ. ವಿಟಮಿನ್ ಎ ಮತ್ತು ಸಿ ಯಿಂದ ಸಮೃದ್ಧವಾಗಿದೆ. ದೇಹವನ್ನು ತಂಪಾಗಿಡುವಲ್ಲೂ ಸಹಕಾರಿ.

Image Credits : Adobe Stock

ಎಲ್ಲವನ್ನು ಎದುರಿಸಿ ಗೆಲ್ಲುತ್ತೀರಿ; ಮೇ 1ರ ಗುರುವಾರದ ದಿನ ಭವಿಷ್ಯ