ಬೇಸಿಗೆಯಲ್ಲಿ ಮಣ್ಣಿನ ಮಡಿಕೆ ನೀರು ಕುಡಿಯುವುದರ ಪ್ರಯೋಜನಗಳು

UNSPLASH

By Priyanka Gowda
Apr 05, 2025

Hindustan Times
Kannada

ಹಿಂದೆಲ್ಲಾ ನೀರು ಕುಡಿಯಲು ಹೆಚ್ಚಾಗಿ ಮಣ್ಣಿನ ಮಡಿಕೆಯನ್ನು ಬಳಸುತ್ತಿದ್ದರು. ಆದರೆ, ಈಗ ಹೆಚ್ಚಿನ ಮಂದಿ ಫ್ರಿಜ್ ನೀರು ಮೊರೆ ಹೋಗುತ್ತಿದ್ದಾರೆ. ಬೇಸಿಗೆಯಲ್ಲಿ ಮಡಿಕೆ ನೀರು ಕುಡಿಯುವುದರ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

UNSPLASH

ಮಣ್ಣಿನ ಮಡಿಕೆಯಲ್ಲಿ ನೀರು ಹಾಕುವುದರಿಂದ ಅದು ನೈಸರ್ಗಿಕವಾಗಿ ತಣ್ಣಗಾಗಲು ಸಹಾಯ ಮಾಡುತ್ತದೆ. ಮಣ್ಣಿನ ಪಾತ್ರೆಯ ಮೇಲ್ಮೆಯಲ್ಲಿ ಸಣ್ಣ ರಂಧ್ರಗಳಿದ್ದು, ಮಡಿಕೆಯಲ್ಲಿರುವ ನೀರಿನಿಂದ ಶಾಖವನ್ನು ಕಳೆದುಕೊಂಡು ನೀರು ತಂಪಾಗುತ್ತದೆ. 

UNSPLASH

ಜೇಡಿಮಣ್ಣು ನೈಸರ್ಗಿಕವಾಗಿ ಕ್ಷಾರೀಯವಾಗಿರುವುದರಿಂದ, ಇದು ಆಮ್ಲೀಯ ಆಹಾರಗಳೊಂದಿಗೆ ಪ್ರತಿಕ್ರಿಯಿಸಿ pH ಮಟ್ಟವನ್ನು ಸರಿಯಾಗಿ ಇಡುತ್ತದೆ.

UNSPLASH

ಪ್ರತಿದಿನ ಮಣ್ಣಿನ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ ವೇಗಗೊಳ್ಳುತ್ತದೆ. ಇದು ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ.

Pinterest

ಮಣ್ಣಿನ ಮಡಿಕೆಯಲ್ಲಿ ನೀರಿನಲ್ಲಿರುವ ಸಮೃದ್ಧ ಖನಿಜಗಳು ಮತ್ತು ಪೋಷಕಾಂಶಗಳು ನಿರ್ಜಲೀಕರಣ ಸಮಸ್ಯೆ ತಡೆಗಟ್ಟಲು ಸಹಾಯ ಮಾಡುತ್ತದೆ.

Pinterest

ಫ್ರಿಜ್‍ನಿಂದ ನೇರವಾಗಿ ತಣ್ಣೀರು ಕುಡಿಯುವುದರಿಂದ ತುರಿಕೆ ಮತ್ತು ಗಂಟಲು ನೋವು ಮುಂತಾದ ಸಮಸ್ಯೆ ಉಂಟಾಗುತ್ತದೆ. ಮಣ್ಣಿನ ಮಡಿಕೆ ನೀರಿನ ತಾಪಮಾನವು ಗಂಟಲು ನೋವಿಗೆ ಶಮನಕಾರಿ.

Pinterest

ಮಣ್ಣಿನ ಮಡಿಕೆಯ ನೀರು ನೈಸರ್ಗಿಕವಾಗಿ ಶುದ್ಧೀಕರಿಸುವ ಗುಣವನ್ನು ಹೊಂದಿದ್ದು, ಕುಡಿಯಲು ಸುರಕ್ಷಿತವಾಗಿದೆ. 

Pinterest

ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.

UNSPLASH

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS