ದಿನವಿಡಿ ನೀರು ಕುಡಿದು ಹೈಡ್ರೇಟ್​ ಆಗಿರಲು ಹೀಗೆ ಮಾಡಿ

By Meghana B
Mar 14, 2024

Hindustan Times
Kannada

ಬೇಸಿಗೆ ಬಂತು. ನಮ್ಮ ದೇಹವನ್ನ ಡಿಹೈಡ್ರೇಟ್​ ಆಗೋಕೆ ಬಿಡಬಾರ್ದು ಅಂದ್ರೆ ದಿನವಿಡಿ ಹೆಚ್ಚು ನೀರು ಕುಡಿಬೇಕು

ಬೆಳಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ 2-3ಗ್ಲಾಸ್​ ನೀರು ಕುಡಿಯಿರಿ

ವ್ಯಾಯಾಮ ಮಾಡುವವರು ವ್ಯಾಯಾಮದ ಮೊದಲು, ವ್ಯಾಯಾಮದ ನಡುವೆ ಹಾಗೂ ವ್ಯಾಯಾಮದ ನಂತರ ತಜ್ಞರು ಹೇಳಿದಂತೆ ನೀರು ಕುಡಿಯಿರಿ

ತಿಂಡಿಗೆ ಮೊದಲು 1 ಹಾಗೂ ತಿಂಡಿಯ ನಂತರ 1 ಗ್ಲಾಸ್​ ಕುಡಿಯಿರಿ

ಕಚೇರಿಗೆ ಅಥವಾ ಯಾವುದೇ ಕೆಲಸಕ್ಕೆ ಹೋದರೂ ಕೂಡ ಪ್ರತಿ 1 ಗಂಟೆಗೊಮ್ಮೆ ಕನಿಷ್ಠ 1 ಗ್ಲಾಸ್​ ನೀರು ಕುಡಿಯದೇ ಇರಬೇಡಿ. 

ಡಿಹೈಡ್ರೇಶನ್​ ಆದ್ರೆ ತಲೆನೋವು ಕೂಡ ಬರತ್ತೆ. ಹೀಗಾಗಿ ತಲೆನೋವು ಬಂದಾಗ ಹೆಚ್ಚು ನೀರು ಕುಡಿಯಿರಿ

ರಾತ್ರಿ ನೀವು ನೀರು ಕುಡಿಯುವ ಪ್ರಮಾಣ ಹಗಲಿನಷ್ಟು ಇರಬೇಕೇಂದೇನಿಲ್ಲ. ಅಗತ್ಯಕ್ಕೆ ಬೇಕಾದಷ್ಟು ಕುಡಿಯಿರಿ. 

ನಿದ್ದೆ ಮಾಡುವ ಮುನ್ನ ಬಾಯಿ, ಗಂಟಲು ಒಣಗದಂತೆ ಸ್ವಲ್ಪ ನೀರು ಕುಡಿದು ಮಲಗಿ

ಬೆಳಗ್ಗೆಯಾಗಲಿ, ಮಧ್ಯಾಹ್ನ-ರಾತ್ರಿವಾಗಲಿ, ತಿಂಡಿ ಹಾಗೂ ಊಟಕ್ಕೆ ಮುನ್ನ ಮತ್ತು ನಂತರ ನೀರು ಕುಡಿಯದೇ ಇರಬೇಡಿ

ಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಮ್ ಇಂಡಿಯಾಗೆ ಬಿಸಿಸಿಐ ಭರ್ಜರಿ ಬಹುಮಾನ