ಈ 5 ಟಿಪ್ಸ್ ಫಾಲೊ ಮಾಡಿದ್ರೆ ಬೇಸಿಗೆಯಲ್ಲಿ ಕೂದಲು ಉದುರುವ ಸಮಸ್ಯೆ ನಿಲ್ಲುತ್ತೆ
By Reshma Apr 21, 2024
Hindustan Times Kannada
ಬೇಸಿಗೆಯ ಸುಡು ಬಿಸಿಲು ಹಾಗೂ ಆರ್ದ್ರತೆಯು ಕೂದಲಿನ ಆರೋಗ್ಯವನ್ನು ಹಾಳು ಮಾಡಬಹುದು. ಇದರಿಂದ ಕೂದಲು ಉದುರುವ ಸಮಸ್ಯೆ ಉದ್ಭವಿಸಬಹುದು. ಬೇಸಿಗೆಯಲ್ಲಿ ಕೂದಲು ಉದುರುವುದನ್ನು ತಡೆಯಲು ಇಲ್ಲಿದೆ 5 ಟಿಪ್ಸ್.
ಬಿಸಿ ಎಣ್ಣೆ ಮಸಾಜ್
ಉಗುರು ಬೆಚ್ಚಗಿನ ಎಣ್ಣೆಯಿಂದ ನಿಮ್ಮ ಕೂದಲಿನ ಬುಡಕ್ಕೆ ಮಸಾಜ್ ಮಾಡಿ. ಇದರಿಂದ ಕೂದಲಿನ ಬುಡದಲ್ಲಿ ರಕ್ತಸಂಚಾರ ವೃದ್ಧಿಯಾಗುತ್ತದೆ. ಇದು ಕೂದಲಿನ ಫಾಲಿಕಲ್‌ಗಳನ್ನು ಸದೃಢವಾಗಿಸುತ್ತದೆ.
ಡೀಪ್ ಕಂಡೀಷನಿಂಗ್
ಡೀಪ್ ಕಂಡೀಷನಿಂಗ್ ಹೇರ್ ಮಾಸ್ಕ್‌ಗಳು ಕೂದಲನ್ನು ಪೋಷಿಸುತ್ತವೆ. ಇದು ಕೂದಲು ಹೈಡ್ರೇಟ್ ಆಗಲು ಸಹಾಯ ಮಾಡುತ್ತದೆ. ಬುಡದಿಂದಲೇ ಕೂದಲು ಉದುರುವುದನ್ನು ತಡೆಯುತ್ತದೆ.
ಹೀಟಿಂಗ್ ಉತ್ಪನ್ನಗಳ ಬಳಕೆ ಕಡಿಮೆ ಮಾಡಿ
ಬೇಸಿಗೆಯಲ್ಲಿ ಹೀಟಿಂಗ್ ಉಪಕರಣಗಳ ಬಳಕೆಯನ್ನು ಕಡಿಮೆ ಮಾಡಿ. ಇದು ಕೂದಲು ಉದುರಲು ಕಾರಣವಾಗಬಹುದು.
ಹೊರಗಡೆ ಹೋಗುವಾಗ ಕೂದಲಿನ ರಕ್ಷಣೆ ಮಾಡಿ
ಮನೆಯಿಂದ ಹೊರಗಡೆ ಹೋಗುವಾಗ ಟೋಪಿ ಅಥವಾ ಸ್ಕ್ರಾರ್ಪ್ ಧರಿಸಿ. ಇದರಿಂದ ಯುವಿ ಕಿರಣಗಳಿಂದ ಕೂದಲಿಗೆ ಹಾನಿಯಾಗುವುದನ್ನು ತಪ್ಪಿಸಬಹುದು.
ಆಲೊವೆರಾ ಜೆಲ್ ಬಳಕೆ
ಆಲೊವೆರಾ ಜೆಲ್ ಕೂದಲು ಹೈಡ್ರೇಟ್ ಆಗುವಂತೆ ನೋಡಿಕೊಳ್ಳುತ್ತದೆ. ಇದು ಕೂದಲನ್ನು ಬುಡದಿಂದಲೇ ಸ್ಟ್ರಾಂಗ್ ಮಾಡುತ್ತದೆ.
Horoscope: ಹೊಸ ಪ್ರಯತ್ನ ಮಾಡುವಿರಿ; ಏಪ್ರಿಲ್ 18ರ ಶುಕ್ರವಾರ ದಿನ ಭವಿಷ್ಯ