ಬೇಸಿಗೆಯಲ್ಲಿ ಕುಡಿಯಲು ಏಲಕ್ಕಿ ಶರಬತ್‌ ರೆಸಿಪಿ 

pixa bay

By Meghana B
Mar 10, 2024

Hindustan Times
Kannada

ರಕ್ತದ ಒತ್ತಡ ನಿಯಂತ್ರಿಸಲು, ಜೀರ್ಣಕ್ರಿಯೆ ಸುಧಾರಿಸಲು, ಆ್ಯಸಿಡಿಟಿ ಸಮಸ್ಯೆ ಕಡಿಮೆ ಮಾಡಲು ಸೇರಿದಂತೆ ಆರೋಗ್ಯ ಪ್ರಯೋಜನಗಳನ್ನು ಏಲಕ್ಕಿ ಹೊಂದಿದೆ. 

pixa bay

ಬೇಸಿಗೆಯಲ್ಲಿ ವಾರಕ್ಕೆ 2-3 ಬಾರಿ ಏಲಕ್ಕಿ ಶರಬತ್‌ ಕುಡಿಯುವುದರಿಂದ ದೇಹವನ್ನು ತಂಪಾಗಿರಿಸಬಹುದು. ಏಲಕ್ಕಿ ಶರಬತ್‌ ಮಾಡುವ ವಿಧಾನ ಇಲ್ಲಿದೆ. 

pixa bay

ಏಲಕ್ಕಿ ಸಿಪ್ಪೆ ತೆಗೆದು ಅದರ ಕಾಳುಗಳನ್ನು ಚೆನ್ನಾಗಿ ರುಬ್ಬಿ ಪುಡಿ ಮಾಡಿಕೊಳ್ಳಿ. ಒಂದು ಚಮಚದಷ್ಟು ಪುಡಿ ಬೇಕು. 

pixa bay

ಒಂದು ಪಾತ್ರೆಗೆ 4 ಕಪ್ ತಣ್ಣೀರು ಹಾಕಿ.  ರುಚಿಗೆ ತಕ್ಕಂತೆ ಸಕ್ಕರೆ ಸೇರಿಸಿ,  ಚಮಚದ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ.

pixa bay

ಇದಕ್ಕೆ ಒಂದು ನಿಂಬೆ ಹಣ್ಣು ಹಿಂಡಿ, ಕಾಲು ಚಮಚ ಕಪ್ಪು ಉಪ್ಪು ಮತ್ತು 1 ಚಮಚ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಕಲಕಿ. 

pixa bay

ಈ ಮಿಶ್ರಣಕ್ಕೆ 8-10 ಐಸ್ ತುಂಡುಗಳನ್ನು ಹಾಕಿ. 5 ನಿಮಿಷದ ಬಳಿಕ ಏಲಕ್ಕಿ ಶರಬತ್ತು ಕುಡಿಯಲು ರೆಡಿ. 

pixa bay

ಅಲ್ಲು ಅರ್ಜುನ್ ಅಭಿನಯದ 10 ಸಿನಿಮಾಗಳ ಪಟ್ಟಿ ಇಲ್ಲಿದೆ ಗಮನಿಸಿ