ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನವಿದೆ ನೋಡಿ
By Rakshitha Sowmya Mar 09, 2024
Hindustan Times Kannada
ಕಲ್ಲಂಗಡಿ ಹಣ್ಣು ಸೇವನೆಯಿಂದ ನಿಮಗೆ ತಿಳಿಯದೆ ಇರುವ ಅದೆಷ್ಟೋ ಪ್ರಯೋಜನಗಳಿವೆ
ಕಲ್ಲಂಗಡಿ ಹಣ್ಣಿನಲ್ಲಿ ಪೊಟ್ಯಾಷಿಯಂ, ಮೆಗೀಷಿಯಂ, ವಿಟಮಿನ್ ಎ, ವಿಟಮಿನ್ ಸಿ ಸೇರಿದಂತೆ ಅನೇಕ ಪೋಷಕಾಂಶಗಳಿವೆ
ಕಲ್ಲಂಗಡಿಯಲ್ಲಿರುವ ಅಮೈನೋ ಆಸಿಡ್ ಸಿಟ್ರುಲಿನ್, ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ರಕ್ತನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ.
ಕಲ್ಲಂಗಡಿಯಲ್ಲಿರುವ ಅಮೈನೋ ಆಸಿಡ್ ಸಿಟ್ರುಲಿನ್ ಸ್ನಾಯು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಕಲ್ಲಂಗಡಿಯಲ್ಲಿರುವ ವಿಟಮಿನ್ ಎ, ಸಿ ಚರ್ಮದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ
ಆದ್ದರಿಂದ ಬೇಸಿಗೆಯಲ್ಲಿ ಪ್ರತಿದಿನವೂ ಒಂದು ತುಂಡಾದರೂ ಕಲ್ಲಂಗಡಿ ಸೇವಿಸಿ