ಎಳನೀರಿನಲ್ಲಿ ನೀರು ಎಷ್ಟಿದೆ ಎಂದು ತಿಳಿಯವುದು ಹೇಗೆ?

By Rakshitha Sowmya
Mar 19, 2024

Hindustan Times
Kannada

ಎಳನೀರು ದೇಹಕ್ಕೆ ಬಹಳ ಒಳ್ಳೆಯದು, ಅದರಲ್ಲೂ ಬೇಸಿಗೆಯಲ್ಲಿ ಇದರಿಂದ ದೇಹ ನಿರ್ಜಲೀಕರಣವಾಗುವುದು ತಪ್ಪುತ್ತದೆ. 

ಎಳನೀರು, ನಮ್ಮ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. 

ಆದರೆ ಹೊರಗೆ ಎಳನೀರು ಖರೀದಿಸುವಾಗ  ಕಾಯಿಯಲ್ಲಿ ಹೆಚ್ಚು ನೀರು ಇರುವುದಿಲ್ಲ ಎಂದು ಕೆಲವರು ದೂರುತ್ತಾರೆ

ನಾವು ಹೇಳುವ ಟಿಪ್ಸ್‌ನಿಂದ, ನಿಮಗೆ ಎಳನೀರಿನಲ್ಲಿ ನೀರು ಹೆಚ್ಚಾಗಿದೆಯೋ, ಕಡಿಮೆ ಇದೆಯೋ ಎಂಬುದನ್ನು ತಿಳಿದುಕೊಳ್ಳಬಹುದು

ನೀವು ಆರಿಸಿದ ಎಳನೀರನ್ನು ನಿಮ್ಮ ಕಿವಿ ಬಳಿ ಹಿಡಿದು ಅಲ್ಲಾಡಿಸಿ, ಅದರಲ್ಲಿ ನೀರು ತುಳುಕುವ ಸದ್ದು ಹೆಚ್ಚಾಗಿದ್ದರೆ ಅದರಲ್ಲಿ ನೀರು ಕಡಿಮೆ ಇದೆ ಎಂದು ಅರ್ಥ.

ನೀರು ಹೆಚ್ಚು ಸ್ಪಿಲ್‌ ಆದರೆ ಅದನ್ನು ಬಿಟ್ಟು ಬೇರೆ ತೆಂಗಿನಕಾಯಿ ಆರಿಸಿ, ಅದರಲ್ಲಿ ನೀರು ಹೆಚ್ಚು ಸದ್ದು ಬಾರದಿದ್ದರೆ ಹೆಚ್ಚು ನೀರು ಇದೇ ಎಂದು ಅರ್ಥ.

ಸಾಮಾನ್ಯವಾಗಿ ದೊಡ್ಡ ಎಳನೀರಿನಲ್ಲಿ ನೀರು ಕಡಿಮೆ ಇರುತ್ತದೆ. ಆದ್ದರಿಂದ ಹಸಿರಾಗಿರುವ ಚಿಕ್ಕ ಎಳನೀರನ್ನು ಆರಿಸಿಕೊಳ್ಳಿ.

ಬಹಳ ಮಾಗಿದ ಹಾಗೂ ಕಂದು ಎಳನೀರಿನಲ್ಲಿ ಹೆಚ್ಚು ನೀರು, ಗಂಜಿ ಇರುವುದಿಲ್ಲ

ಮುಂಬೈ ಇಂಡಿಯನ್ಸ್ ತಂಡದ ಗ್ಲಾಮರಸ್‌ ಮಾಲಕಿ