ನಿಮ್ಮನೆಯ ಮುದ್ದು ಪ್ರಾಣಿಗೆ ಬೇಸಿಗೆಯ ಬಿಸಿ ಕಾಡದಿರಲು ಈ 5 ಟಿಪ್ಸ್ ಅನುಸರಿಸಿ
By Reshma Apr 21, 2024
Hindustan Times Kannada
ಬೇಸಿಗೆಯ ತಾಪ ಸಾಕುಪ್ರಾಣಿಗಳ ಮೇಲೂ ಸಾಕಷ್ಟು ಪರಿಣಾಮ ಬೀರುತ್ತದೆ. ಇದರಿಂದ ಅವುಗಳಿಗೆ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ಬೇಸಿಗೆಯಲ್ಲಿ ಸಾಕುಪ್ರಾಣಿಗಳ ಕಾಳಜಿಗೆ ಈ 5 ಕ್ರಮಗಳನ್ನು ತಪ್ಪದೇ ಪಾಲಿಸಬೇಕು.
ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಿ
ಬೇಸಿಗೆಯ ಬಿರು ಬಿಸಿಲಿನಲ್ಲಿ ಪ್ರಾಣಿಗಳಿಗೂ ಡೀಹೈಡ್ರೇಷನ್ ಸಮಸ್ಯೆ ಕಾಡುತ್ತದೆ. ಆ ಕಾರಣಕ್ಕೆ ಅವು ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಅವುಗಳಿಗೆ ಕುಡಿಯಲು ಸಾಕಷ್ಟು ನೀರು ನೀಡಿ.
ಹೊರಗಡೆ ಚಟುವಟಿಕೆಗೆ ಬ್ರೇಕ್ ಹಾಕಿ
ನಿಮ್ಮ ಸಾಕುಪ್ರಾಣಿಯನ್ನು ಹಗಲಿನ ವೇಳೆ ಹೊರಗಡೆ ಕರೆದ್ಯೊಯದೇ ಇರುವುದು ಉತ್ತಮ. ಸಂಜೆ ವೇಳೆ ವಾಕಿಂಗ್ ಕರೆದುಕೊಂಡು ಹೋಗಿ. ಬಿಸಿಲಿನ ವೇಳೆ ಅವುಗಳಿಗೆ ಯಾವುದೇ ದೈಹಿಕ ಚಟುವಟಿಕೆ ಮಾಡಿಸದೇ ಇರುವುದು ಉತ್ತಮ.
ನೀರಿನಾಂಶ ಇರುವ ಆಹಾರ
ಸಾಕುಪ್ರಾಣಿಗಳಿಗೆ ಬೇಸಿಗೆಯಲ್ಲಿ ಹೆಚ್ಚು ನೀರಿನಾಂಶ ಇರುವ ಆಹಾರ ಪದಾರ್ಥಗಳನ್ನೇ ನೀಡಿ. ಕಲ್ಲಂಗಡಿ, ಮೊಸರು ಇಂತಹವನ್ನು ಹೆಚ್ಚು ಕೊಡಿ.
ತಂಪಾದ ವಾತಾವರಣ
ನಿಮ್ಮಂತೆಯೇ ಪ್ರಾಣಿಗಳಿಗೂ ಬಿಸಿಲಿನ ತಾಪ ತಾಕುವ ಕಾರಣ ಅವುಗಳನ್ನು ಫ್ಯಾನ್ ಅಥವಾ ಏಸಿ ಗಾಳಿಯಲ್ಲಿ ಇರಿಸಿ. ಇದರಿಂದ ಅವುಗಳ ದೇಹ ಬೇಗನೆ ಹೀಟ್ ಆಗದಂತೆ ನೋಡಿಕೊಳ್ಳಬಹುದು.
ಅನಾರೋಗ್ಯ ಲಕ್ಷಣಗಳನ್ನು ಗಮನಿಸಿ
ಸಾಕುಪ್ರಾಣಿಗಳನ್ನು ಹತ್ತಿರದಿಂದ ಗಮನಿಸಿ. ಹೀಟ್ ಸ್ಟ್ರೋಕ್ ಲಕ್ಷಣಗಳು ಕಂಡರೆ ನಿರ್ಲಕ್ಷ್ಯ ಮಾಡದಿರಿ. ಅವುಗಳಿಗೆ ಆಯಾಸ, ಸುಸ್ತು ಕಾಣಿಸಿದರೆ ಗಮನಿಸಿ, ಅತಿಯಾದ ಬಿಸಿಲು ಪ್ರಾಣಿಗಳಿಗೆ ಗಂಭೀರ ಅಪಾಯ ಉಂಟು ಮಾಡಬಹುದು.