ಬೇಸಿಗೆಯಲ್ಲಿ ನಾಯಿಗಳು ಆಕ್ರಮಣಕಾರಿ ವರ್ತನೆ ತೋರುವುದೇಕೆ, ಇಲ್ಲಿದೆ ಕುತೂಹಲಕಾರಿ ಮಾಹಿತಿ 

By Reshma
May 02, 2024

Hindustan Times
Kannada

ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ತಾಪಮಾನ ಏರಿಕೆಯ ಪರಿಣಾಮ ಮನುಷ್ಯರ ಮೇಲಷ್ಟೇ ಪ್ರಾಣಿಗಳ ಮೇಲೂ ಆಗುತ್ತಿದೆ. 

ಬೇಸಿಗೆಯಲ್ಲಿ ಸಾಕುನಾಯಿಗಳು ಹಾಗೂ ಬೀದಿನಾಯಿಗಳ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತದೆ. 

ಬಿರು ಬಿಸಿಲಿನಲ್ಲಿ ನಾಯಿಗಳು ಹೆಚ್ಚು ಆಕ್ರಮಣಕಾರಿ ವರ್ತನೆ ತೋರುತ್ತವೆ. ಬೇಸಿಗೆಯಲ್ಲಿ ನಾಯಿಗಳು ಅಕ್ರಮಣಕಾರಿ ವರ್ತಿಸಲು ಕಾರಣವೇನು ತಿಳಿಯಿರಿ.

ಚಳಿ, ಬಿಸಿಲು, ಮಳೆ, ಚಂಡಮಾರುತದಂತಹ ಹವಾಮಾನ ವೈಪರೀತ್ಯವು ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳ ಮೇಲೂ ಆಗುತ್ತದೆ.

ಮಾಹಿತಿಯ ಪ್ರಕಾರ ಶೀತ ವಾತಾವರಣದಲ್ಲಿ ಖಿನ್ನತೆಗೆ ಒಳಗಾಗುವ ನಾಯಿಗಳು ಬೇಸಿಗೆಯಲ್ಲಿ ಹೈಪರ್‌ಆಕ್ಟಿವ್‌ ಆಗುತ್ತವೆ.

ಬೇಸಿಗೆಯಲ್ಲಿ ನಾಯಿಗಳು ಹೆಚ್ಚು ಆಕ್ರಮಣಕಾರಿಯಾಗುತ್ತವೆ ಎಂದು ಹಲವು ಅಧ್ಯಯನಗಳು ಸಾಬೀತುಪಡಿಸಿವೆ. 

ಅಮೆರಿಕನ್‌ ವೆಟರ್ನರಿ ಮೆಡಿಕಲ್‌ ಅಸೋಸಿಯೇಷನ್‌ ಅಧ್ಯಕ್ಷ ಜೋಸ್‌ ಅರ್ಚ್‌ ಅವರ ಪ್ರಕಾರ ಮನುಷ್ಯಗಿಂತ ಹೆಚ್ಚು ಪ್ರಾಣಿಗಳ ದೇಹದ ತಾಪ ಏರಿಕೆಯಾಗುತ್ತದೆ. 

ಬೇಸಿಗೆಯಲ್ಲಿ ತಾಪಮಾನ ಏರಿಕೆಯ ಕಾರಣದಿಂದ ನಾಯಿಗಳ ಥರ್ಮೋರ್ಗ್ಯುಲೇಷನ್‌ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಅವುಗಳಿಗೆ ಶಾಖವನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಅವು ಅಸಹಜವಾಗಿ ವರ್ತಿಸಲು ಆರಂಭಿಸುತ್ತವೆ. 

ಪೆಸ್‌ಸ್ಟೇಟ್‌ ಯೂನಿವರ್ಸಿಟಿ ನಡೆಸಿದ ಸಂಶೋಧನೆಯು ಬೇಸಿಗೆಯಲ್ಲಿ ಕೆಲವು ನಾಯಿಗಳಲ್ಲಿ ಕಾರ್ಟಿಸೋಲ್‌ ಹಾರ್ಮೋನ್‌ ಹೆಚ್ಚುತ್ತದೆ ಎಂದು ಬಹಿರಂಗ ಪಡಿಸಿದೆ. ಇದರಿಂದಾಗಿ ಅವು ಒತ್ತಡಕ್ಕೆ ಒಳಗಾಗಿ ಅಸಹಜವಾಗಿ ವರ್ತಿಸುತ್ತವೆ. 

ಬೇಸಿಗೆಯಲ್ಲಿ ನಾಯಿಗಳ ಕಣ್ಣಿನಲ್ಲಿ ನೀರು ಸೋರುತ್ತಿದ್ದರೆ, ನಡೆಯುವಾಗ ಅಲ್ಲಲ್ಲಿ ನಿಲ್ಲುತ್ತಿದ್ದರೆ, ಮಾತನಾಡದೇ ಬೊಗಳುತ್ತಿದ್ದರೆ, ವಾಂತಿ ಅಥವಾ ಬೇಧಿಯಿಂದ ಬೊಗಳುತ್ತಿದ್ದರೆ ನಾಯಿಗೆ ಹೀಟ್‌ ಸ್ಟ್ರೋಕ್‌ ಆಗಿದೆ ಎಂದರ್ಥ. 

ನಾಯಿಗಳಿಗೆ ಹೀಟ್‌ ಸ್ಟ್ರೋಕ್‌ ಆಗಿದ್ದರೆ ತಕ್ಷಣಕ್ಕೆ ಚಿಕಿತ್ಸೆ ಕೊಡಿಸಿ. ಬೇಸಿಗೆಯಲ್ಲಿ ನಾಯಿಗಳಿಗೆ ಸಾಕಷ್ಟು ಶುದ್ಧ ನೀರು ಕುಡಿಯಲು ನೀಡಿ. 

ಮನೆಯಲ್ಲಿ ಚೆನ್ನಾಗಿ ಗಾಳಿ ಇರುವ, ತಂಪಾದ ವಾತಾವರಣದಲ್ಲಿ ನಾಯಿಯನ್ನು ಕಟ್ಟಿಹಾಕಿ. ಬಿಸಿಲಿನ ಶಾಖ ನೇರವಾಗಿ ನಾಯಿಗೆ ತಾಕದಂತೆ ನೋಡಿಕೊಳ್ಳಿ. 

ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್‌ ಸಂಜನಾ ಪಾತ್ರಧಾರಿ ಆರತಿ