ನೀರು ಕುಡಿಯದೇ ದೇಹವನ್ನು ಹೈಡ್ರೇಟ್ ಆಗಿರಿಸುವ ಇತರ ವಿಧಾನಗಳಿವು
By Reshma May 03, 2024
Hindustan Times Kannada
ಅತಿಯಾದ ತಾಪಮಾನವು ಡೀಹೈಡ್ರೇಷನ್‌ಗೆ ಕಾರಣವಾಗುತ್ತದೆ. ಈ ಸಮಯದಲ್ಲಿ ಸಾಕಷ್ಟು ನೀರು ಕುಡಿಯುವುದು ಅವಶ್ಯ. ಆದರೆ ನೀರು ಕುಡಿಯದೇ ನೈಸರ್ಗಿಕ ವಿಧಾನದಲ್ಲಿ ದೇಹದಲ್ಲಿ ನೀರಿನಾಂಶ ಹೆಚ್ಚಿಸಿಕೊಳ್ಳುವ ವಿಧಾನಗಳು ಇಲ್ಲಿವೆ.
ಸ್ಮೂಥಿಗಳು
ಬಗೆ ಬಗೆಯ ಹಣ್ಣು, ತರಕಾರಿಗಳಿಂದ ಸ್ಮೂಥಿಗಳನ್ನು ತಯಾರಿಸಿ ಕುಡಿಯಬಹುದು. ಇದು ದೇಹ ಹೈಡ್ರೇಟ್ ಆಗುವಂತೆ ಮಾಡುತ್ತದೆ. ಬ್ರೆರಿ, ಸೌತೆಕಾಯಿ ಪಾಲಕ್ ಇದಕ್ಕೆ ಬೆಸ್ಟ್ ಆಯ್ಕೆ.
ಓಟ್‌ಮೀಲ್
ಓಟ್ಸ್ ಬೇಯಿಸುವಾಗ ನೀರಿನಾಂಶವನ್ನು ಹೀರಿಕೊಳ್ಳುತ್ತದೆ. ನೀರಿನಲ್ಲಿ ನೀರಿನಾಂಶ ಸಮೃದ್ಧವಾಗಿರುವ ಕಾರಣ ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಇದು ಹಸಿವನ್ನು ಕಡಿಮೆ ಮಾಡಿ ದೇಹಕ್ಕೆ ಶಕ್ತಿ ಒದಗಿಸುತ್ತದೆ.
ಸಿಟ್ರಸ್ ಅಂಶ ಇರುವ ಹಣ್ಣುಗಳು
ಕಿತ್ತಳೆ, ಮೊಸಂಬಿಯಂತಹ ಸಿಟ್ರಸ್ ಅಂಶ ಅಧಿಕವಾಗಿರುವ ಹಣ್ಣುಗಳಲ್ಲಿ ನೀರಿನಾಂಶ ಹೆಚ್ಚಿರುತ್ತದೆ. ಇದು ವಿಟಮಿನ್ ಸಿಯಿಂದ ಸಮೃದ್ಧವಾಗಿರುತ್ತದೆ. ಇದು ಬೇಸಿಗೆಯಲ್ಲಿ ದೇಹವನ್ನು ಹ್ರೈಡೇಟ್ ಆಗಿರಲು ಸಹಾಯ ಮಾಡುತ್ತದೆ.
ನೀರಿನಾಂಶ ಇರುವ ಸೊಪ್ಪು, ತರಕಾರಿಗಳು
ನೀರಿನಾಂಶ ಹೆಚ್ಚಿರುವ ಹಣ್ಣು-ತರಕಾರಿಗಳ ಸೇವನೆಯು ದೇಹಕ್ಕೆ ಅಗತ್ಯವಿರುವ ನೀರಿನಾಂಶವನ್ನು ಒದಗಿಸುತ್ತದೆ.
ಹಣ್ಣುಗಳು
ಬೇಸಿಗೆಯಲ್ಲಿ ಸಿಗುವ ಕಲ್ಲಂಗಡಿ, ಬ್ರೆರಿ, ಕಿವಿಯಂತಹ ಹಣ್ಣುಗಳಲ್ಲಿ ನೀರಿನಾಂಶ ಸಮೃದ್ಧವಾಗಿರುವ ಕಾರಣ ಇದು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ.
ಮಹಾ ಕುಂಭಮೇಳ ಮುಗಿದ ನಂತರ ನಾಗಾ ಸಾಧುಗಳು ಎಲ್ಲಿಗೆ ಹೋಗುತ್ತಾರೆ