ಟಿ20 ಕ್ರಿಕೆಟ್​ನಲ್ಲಿ ಸುನಿಲ್ ನರೇನ್ 500 ಪಂದ್ಯ; ಈ ಮೈಲಿಗಲ್ಲು ಮುಟ್ಟಿದ ವಿಶ್ವದ 4ನೇ ಆಟಗಾರ

By Prasanna Kumar P N
Mar 30, 2024

Hindustan Times
Kannada

17ನೇ ಆವೃತ್ತಿಯ ಐಪಿಎಲ್​ನ 10ನೇ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಕಣಕ್ಕಿಳಿದ ಕೆಕೆಆರ್​​ ಸ್ಪಿನ್ನರ್​ ಸುನಿಲ್ ನರೇನ್ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.

ಆರ್​ಸಿಬಿ ವಿರುದ್ಧ ನರೇನ್ ಆಡಿದ ಪಂದ್ಯವು ಟಿ20 ಕ್ರಿಕೆಟ್​ನಲ್ಲಿ ಅವರ 500ನೇ ಪಂದ್ಯವಾಗಿದ್ದು, ಹೊಸ ದಾಖಲೆ ಬರೆದಿದ್ದಾರೆ.

ಸ್ಮರಣೀಯ ಮೈಲಿಗಲ್ಲನ್ನು ಸಾಧಿಸಿದ ವಿಶ್ವದ ನಾಲ್ಕನೇ ಹಾಗೂ ವೆಸ್ಟ್​ ಇಂಡೀಸ್​ನ 3ನೇ ಆಟಗಾರ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರರ ಪೈಕಿ , ವೆಸ್ಟ್ ಇಂಡೀಸ್​ನ ಕೀರಾನ್ ಪೊಲಾರ್ಡ್ (660 ಪಂದ್ಯ) ಅಗ್ರಸ್ಥಾನದಲ್ಲಿದ್ದಾರೆ.

ವೆಸ್ಟ್ ಇಂಡೀಸ್​ನ ಡ್ವೇನ್ ಬ್ರಾವೋ 573 ಪಂದ್ಯ, ಪಾಕಿಸ್ತಾನದ ಶೋಯೆಬ್ ಮಲಿಕ್ 542 ಪಂದ್ಯಗಳಲ್ಲಿ ಕಣಕ್ಕಿಳಿದು ಕ್ರಮವಾಗಿ 2, 3ನೇ ಸ್ಥಾನದಲ್ಲಿದ್ದಾರೆ.

ಒಟ್ಟು 500 ಪಂದ್ಯಗಳಲ್ಲಿ 537 ವಿಕೆಟ್ ಪಡೆದಿರುವ ನರೇನ್, 3783 ರನ್ ಗಳಿಸಿದ್ದಾರೆ. ಐಪಿಎಲ್​ನಲ್ಲಿ 164 ಪಂದ್ಯಗಳಲ್ಲಿ 165 ವಿಕೆಟ್ ಪಡೆದಿದ್ದಾರೆ.

ಆರ್​​ಸಿಬಿ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ 47 ರನ್ ಗಳಿಸಿದ ನರೇನ್ ಬೌಲಿಂಗ್​ನಲ್ಲಿ 1 ವಿಕೆಟ್ ಪಡೆದು ಕೆಕೆಆರ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು.

ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna