ಉದ್ಯೋಗದಲ್ಲಿ ಸ್ಫೂರ್ತಿ, ಪ್ರೇರಣೆಗೆ ಸ್ವಾಮಿ ವಿವೇಕಾನಂದರ 11 ನುಡಿಮುತ್ತುಗಳಿವು

By Raghavendra M Y
Jun 04, 2024

Hindustan Times
Kannada

ವಿವೇಕಾಂದನರ ಬೋಧನೆ ಉದ್ಯೋಗದಲ್ಲಿರುವವರಿಗೆ ಸ್ಪೂರ್ತಿಯನ್ನ ನೀಡುತ್ತೆ. ವೃತ್ತಿಯಲ್ಲಿ ಶ್ರೇಷ್ಠತೆ, ಪ್ರಮಾಣಿಕತೆ, ನೈತಿಕತೆಗೆ ಮಾರ್ಗದರ್ಶನವಾಗಿದೆ

ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ, ಈ ಮಾತು ದೇಶದ ಬಹುತೇಕ ಯುವಕರ ಮೇಲೆ ಪರಿಣಾಮ ಬೀರಿದೆ

ನೀವು ನಿಮ್ಮನ್ನು ನಂಬುವವರೆಗೂ ದೇವರನ್ನು ನಂಬಲು ಸಾಧ್ಯವಿಲ್ಲ. ಈ ನುಡಿಮುತ್ತು ಆತ್ಮವಿಶ್ವಾಸಕ್ಕೆ ಪ್ರೇರಣೆಯಾಗಿದೆ

ಗುರಿಯನ್ನು ತಲುಪುವ ಮಾರ್ಗವೆಂದರೆ ಕಠಿಣ ಪರಿಶ್ರಮ. ಉದ್ಯೋಗದಲ್ಲಿ ಯಶಸ್ಸು ಕಾಣಲು ವಿವೇಕಾನಂದರ ಈ ಮಾತು ಪ್ರಮುಖವಾಗಿದೆ

ನಿಮ್ಮ ಜೀವನದಲ್ಲಿ ಅಪಾಯಗಳನ್ನು ತೆಗೆದುಕೊಳ್ಳಿ. ನೀವು ಗೆದ್ದರೆ ಮುನ್ನಡೆಸಬಹುದು. ನಾಯಕತ್ವಕ್ಕೆ ಈ ನುಡಿಮುತ್ತು ಅಮೂಲ್ಯವಾಗಿದೆ

ಸತ್ಯವನ್ನು ಸಾವಿರ ವಿಧಗಳಲ್ಲಿ ಹೇಳಬಹುದು. ಆದರೂ ಪ್ರತಿಯೊಂದು ಸತ್ಯವಾಗಿರಬಹುದು. ವೃತ್ತಿಯಲ್ಲಿ ಪ್ರಮಾಣಿಕತೆಗೆ ಈ ಮಾತು ಸ್ಪೂರ್ತಿಯಾಗಿದೆ

ಒಂದು ಉಪಾಯ ತೆಗೆದುಕೊಳ್ಳಿ. ಆ ಒಂದು ಕಲ್ಪನೆಯನ್ನು ನಿಮ್ಮ ಜೀವನವನ್ನಾಗಿ ಮಾಡಿಕೊಳ್ಳಿ. ಗುರಿಯನ್ನು ಕೇಂದ್ರೀಕರಿಸಲು ಇದು ನೆರವಾಗುತ್ತೆ

ಮನುಕುಲದ ಗುರಿ ಜ್ಞಾನ. ವೃತ್ತಿಯಲ್ಲಿ ನಿರಂತರ ಕಲಿಕೆ ಮತ್ತು ಸ್ವಯಂ ಸುಧಾರಣೆಗೆ ಈ ಮಾತು ಅತ್ಯಗತ್ಯ

ನಮ್ಮ ಆಲೋಚನೆಗಳನ್ನು ನಾವೇ ರೂಪಿಸಿದ್ದು. ಆದ್ದರಿಂದ ನೀವು ಏನು ಯೋಜಿಸುತ್ತೀರಿ ಎಂಬುದರರ ಬಗ್ಗೆ ಕಾಳಜಿ ವಹಿಸಿ. ಇದು ಕೂಡ ಧನಾತ್ಮಕ ಚಿಂತನೆಗೆ ಅತ್ಯಗತ್ಯ

ದಿನಕ್ಕೊಮ್ಮೆ ನಿಮ್ಮೊಂದಿಗೆ ಮಾತನಾಡಿಕೊಳ್ಳಿ. ಇಲ್ಲದಿದ್ದರೆ ನೀವು ಜಗತ್ತಿನಲ್ಲಿ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವುದನ್ನು ಕಳೆದುಕೊಳ್ಳುತ್ತೀರಿ

ಯಾವುದಕ್ಕೂ ಹೆದರಬೇಡಿ. ನೀವು ಅದ್ಭುತವಾದ ಕೆಲಸವನ್ನು ಮಾಡುತ್ತೀರಿ. ಬದಲಾವಣೆ ಮತ್ತು ಅನಿಶ್ಚಿತತೆಯನ್ನು ಎದುರಿಸುವಾಗ ಈ ವಿಶ್ವಾಸದ ಮಾತು ಅಗತ್ಯವಾಗಿದೆ

ನಾವು ಎಷ್ಟು ಹೊರಗೆ ಬಂದು ಇತರರಿಗೆ ಒಳ್ಳೆಯದನ್ನು ಮಾಡುತ್ತೇವೆಯೋ ಅಷ್ಟು ನಮ್ಮ ಹೃದಯಗಳು ಶುದ್ಧವಾಗುತ್ತವೆ. ವೃತ್ತಿಯಲ್ಲಿ ಯಶಸ್ಸಿಗೆ ಇದು ಮಾತು ನೆರವಾಗುತ್ತೆ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS