ಕನಸಿನಲ್ಲಿ ಪಾರಿವಾಳ ನೋಡುವುದು ಏನು ಅರ್ಥ?

By Rakshitha Sowmya
May 19, 2024

Hindustan Times
Kannada

ಸ್ವಪ್ನಶಾಸ್ತ್ರದ ಪ್ರಕಾರ ಪ್ರತಿದಿನ ನಾವು ಕಾಣುವ ಪ್ರತಿ ಕನಸಿಗೂ ಅರ್ಥವಿರುತ್ತದೆ

ಕೆಲವೊಮ್ಮೆ ನಾವು ಎಂದೂ ಊಹಿಸಿರದ ಕನಸು ಕಾಣುತ್ತೇವೆ. ಆದರೆ ಆ ಕನಸುಗಳ ಅರ್ಥ ಏನೆಂದು ತಿಳಿಯುವುದಿಲ್ಲ.  

ಎಷ್ಟೋ ಬಾರಿ ನಾವು ಕನಸಿನಲ್ಲಿ ಪಾರಿವಾಳ ನೋಡುತ್ತೇವೆ, ಆ ರೀತಿ ಪಾರಿವಾಳ ನೋಡುವುದು ಶುಭವೋ, ಅಶುಭವೋ ನೋಡೋಣ

ಡ್ರೀಮ್‌ ಸೈನ್ಸ್‌ ಪ್ರಕಾರ ಕನಸಿನಲ್ಲಿ ಪಾರಿವಾಳ ನೋಡುವುದು ಸಂತೋಷದ ಸಂಕೇತವಾಗಿದೆ

ಒಬ್ಬ ವ್ಯಕ್ತಿಯು ಹಣದ ಕೊರತೆ ಎದುರಿಸುತಿದ್ದು ಕನಸಿನಲ್ಲಿ ಪಾರಿವಾಳವು ಪೂರ್ವದಿಂದ ಪಶ್ಚಿಮಕ್ಕೆ ಹಾರುತ್ತಿರುವುದನ್ನು ನೋಡಿದರೆ, ಅವನು ಶೀಘ್ರದಲ್ಲೇ ಹಣವನ್ನು ಪಡೆಯುತ್ತಾನೆ ಎಂದು ಅರ್ಥ

  ಅವಿವಾಹಿತ ಹುಡುಗ/ಹುಡುಗಿ ತನ್ನ ಕನಸಿನಲ್ಲಿ ಪಾರಿವಾಳವು ಮನೆಯ ಛಾವಣಿಯ ಮೇಲೆ ಕುತಿತು ಅರಚುವ ಕನಸು ಕಂಡರೆ ಅವರು ಶೀಘ್ರದಲ್ಲೇ ವಿವಾಹವಾಗುತ್ತಾರೆ ಎಂದು ಅರ್ಥ. 

ವಿದ್ಯಾರ್ಥಿಯು ಕನಸಿನಲ್ಲಿ ಪಾರಿವಾಳ ಕಂಡರೆ ಮುಂದೆ ಭವಿಷ್ಯದಲ್ಲಿ ಆತ ಉನ್ನತ ಯಶಸ್ಸು ಸಾಧಿಸುತ್ತಾನೆ ಎಂದು ಅರ್ಥ

ಆದರೆ ಪಾರಿವಾಳದ ಹಿಂಡು ಕನಸಿನಲ್ಲಿ ಬಂದರೆ ಅದು ನಿಮಗೆ ಮುಂದಿನ ದಿನಗಳಲ್ಲಿ ಅನಾರೋಗ್ಯ ಕಾಡುವ ಎಚ್ಚರಿಕೆ ನೀಡುತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ವಿದ್ವಾನ್‌ ಮಹಾದೇವಪ್ಪ ಅವರ ಪುತ್ರರಾದ ಮೈಸೂರು ನಾಗರಾಜ್‌ ಹಾಗೂ ಮೈಸೂರು ಮಂಜುನಾಥ್‌