ಕನಸಿನಲ್ಲಿ ಈ 5 ಪ್ರಾಣಿಗಳನ್ನು ಕಂಡರೆ ಏನು ಅರ್ಥ?

By HT Kannada Desk
Mar 29, 2024

Hindustan Times
Kannada

ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಾವು ಕಾಣುವ ಪ್ರತಿಯೊಂದು ಕನಸಿಗೂ ಬಹಳ ಅರ್ಥವಿದೆ

ಕನಸಿನಲ್ಲಿ ಕೆಲವೊಂದು ಪ್ರಾಣಿಗಳನ್ನು ನೋಡಿದರೆ ಅದು ಶುಭದ ಸಂಕೇತ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ

ಹಿಂದೂ ಧರ್ಮದಲ್ಲಿ ಗೋವನ್ನು ದೇವರಂತೆ ಪೂಜಿಸಲಾಗುತ್ತದೆ. ಆದ್ದರಿಂದ ನಿಮ್ಮ ಕನಸಿನಲ್ಲಿ ಗೋವು ಬಂದರೆ ಅದು ಶುಭ ಸಂಕೇತ

ಒಂದು ವೇಳೆ ನೀವು ಕನಸಿನಲ್ಲಿ ಹಾಲು ಕೊಡುವ ಹಸು, ಹಾಲು ಕರೆಯುತ್ತಿರುವಂತೆ ಕಂಡರೆ ಅದು ನಿಮ್ಮ ಜೀವನದಲ್ಲಿ ಸುಖ, ಸಮೃದ್ಧಿಯ ಮುನ್ಸೂಚನೆ ತೋರುತ್ತಿದೆ. 

ಕನಸಿನಲ್ಲಿ ಸಿಂಹ ಕಾಣಿಸಿಕೊಂಡರೆ ಕೆಲವೇ ದಿನಗಳಲ್ಲಿ ನಿಮಗೆ ರಾಜಯೋಗ ಇದೆ ಎಂದು ಅರ್ಥ

ಕನಸಿನಲ್ಲಿ ನಾಯಿಯನ್ನು ನೋಡುವುದು ಒಳ್ಳೆಯ ಸಂಕೇತ, ಹಾಗೇ ನಾಯಿ ಬೊಗಳುವ ಸದ್ದು ಕೂಡಾ ಒಳ್ಳೆಯದು

ಆನೆಯನ್ನು ಕಾಡಿನ ಶಕ್ತಿಶಾಲಿ ಪ್ರಾಣಿ ಎಂದು ಕರೆಯಲಾಗುತ್ತದೆ, ಒಂದು ವೇಳೆ ನಿಮ್ಮ ಕನಸಲ್ಲಿ ಆನೆ ಬಂದರೆ ಅದರಿಂದ ನಿಮಗೆ ಲಾಭವಾಗುತ್ತದೆ

ಕನಸಿನಲ್ಲಿ ಕೋತಿ ಕಂಡರೆ ನಿಮ್ಮ ಆರ್ಥಿಕ ಪರಿಸ್ಥಿತಿ  ಸುಧಾರಿಸಲಿದೆ ಎಂದು ಅರ್ಥ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದುರ್ಗಾ ಉಪಾಸನೆ ಮಾಡುವುದು ಹೇಗೆ? ಇಲ್ಲಿದೆ ಸಲಹೆ