ಹಚ್ಚೆ ಇದ್ದರೆ ಸರ್ಕಾರಿ ಕೆಲಸ ಸಿಗುವುದಿಲ್ಲವೇ?

By Prasanna Kumar P N
Aug 29, 2024

Hindustan Times
Kannada

ಯುವಕರಿಗೆ ಟ್ಯಾಟೂ ಹಾಕಿಸಿಕೊಳ್ಳುವ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಾತ್ರವಲ್ಲ ದೇಹದ ತುಂಬೆಲ್ಲಾ ಹಚ್ಚೆ ಹಾಕಿಸಿಕೊಳ್ಳುವಲ್ಲಿ ಹಿರಿಯರೂ ಹಿಂದೆ ಬಿದ್ದಿಲ್ಲ.

ಆದರೆ, ಹಚ್ಚೆ ಹಾಕಿಸಿಕೊಂಡರೆ ಸರ್ಕಾರಿ ಕೆಲಸ ಸಿಗುವುದಿಲ್ಲ ಎಂಬ ಮಾತು ಮೊದಲಿನಿಂದಲೂ ಇದೆ. ಹಾಗಿದ್ದರೆ ಇದಕ್ಕೆ ಸಂಬಂಧಿಸಿದ ನಿಯಮಗಳು ಏನಿವೆ?

ಟ್ಯಾಟೂ ಹಾಕಿಸಿಕೊಂಡವರಿಗೆ ಸರ್ಕಾರಿ ಕೆಲಸ ಸಿಗುವುದಿಲ್ಲ. ಹಾಗಂತ ಸಂಪೂರ್ಣ ನಿಜವಲ್ಲ. ಅದಕ್ಕೆಂದೇ ಕೆಲವು ಷರತ್ತುಗಳಿವೆ.

ಭಾರತ ಸರ್ಕಾರದ ನಿಯಮದ ಪ್ರಕಾರ, ಬುಡಕಟ್ಟಿನ ಪ್ರಚಲಿತ ಪದ್ಧತಿಗಳು ಮತ್ತು ಸಂಪ್ರದಾಯಗಳಿಂದಾಗಿ ಜನರು ಶಾಶ್ವತ ಹಚ್ಚೆ ಹಾಕಿಸಿಕೊಳ್ಳಲು ಯಾವುದೇ ರೀತಿಯ ನಿರ್ಬಂಧವಿಲ್ಲ.

ಉಳಿದವರಿಗೆ ಸಣ್ಣ, ಸುರಕ್ಷಿತ ಹಚ್ಚೆಗೆ ಮಾತ್ರ ಅನುಮತಿಸಲಾಗಿದೆ. ಆದರೆ ಹಚ್ಚೆ ಯಾವುದೇ ಧಾರ್ಮಿಕ ಚಿಹ್ನೆಗಳು ಅಥವಾ ಪ್ರೀತಿಪಾತ್ರರ ಹೆಸರನ್ನು ಹೊಂದಿರಬಾರದು.

ಸೇನೆ ಮತ್ತು ಪೊಲೀಸ್ ಇಲಾಖೆಗೆ ಸೇರುವ ವ್ಯಕ್ತಿಯ ದೇಹದ ಹೊರ ಭಾಗದಲ್ಲಿ ಹಚ್ಚೆ ಹಾಕಿಸಿಕೊಳ್ಳುವಂತಿಲ್ಲ.

ಪೊಲೀಸ್ ಅಥವಾ ಸೇನಾ ನೇಮಕಾತಿ ವೇಳೆ ಅಭ್ಯರ್ಥಿಯು ತನ್ನ ಹಚ್ಚೆಗಳನ್ನು ತೆಗೆದು ಹಾಕಿದ್ದರೆ ಅವನನ್ನು ತಿರಸ್ಕರಿಸುವಂತಿಲ್ಲ.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಟ್ಯಾಟೂ ಬಗ್ಗೆ ನೀತಿ ಇದೆ. ಅಭ್ಯರ್ಥಿಯು ಅದರ ವ್ಯಾಪ್ತಿಗೆ ಬಂದರೆ, ನಂತರ ಅವರು ಕೆಲಸ ಪಡೆಯುವಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ.

ಹಚ್ಚೆಗಳಿಂದ ಚರ್ಮ ರೋಗಗಳು, ಎಚ್‌ಐವಿ ಮತ್ತು ಹೆಪಟೈಟಿಸ್‌ ರೋಗಗಳ ಅಪಾಯ ಇದೆ. ಇದೇ ಕಾರಣಕ್ಕೆ ಸರ್ಕಾರಿ ಕೆಲಸ ಸಿಗಲ್ಲ

2024ರ ಅಕ್ಟೋಬರ್ 2ಕ್ಕೆ ವರ್ಷದ ಕೊನೆಯ ಸೂರ್ಯಗ್ರಹಣ; ಭಾರತದಲ್ಲಿ ಗೋಚರಿಸುತ್ತಾ?

Pixabay