ಬಿಸಿ ಟೀ ಕುಡಿದರೆ ಕ್ಯಾನ್ಸರ್‌ ಬರಬಹುದೇ?

By Praveen Chandra B
Oct 23, 2024

Hindustan Times
Kannada

ಚಹಾ ಪ್ರಿಯರು ಒಂದು ಹನಿ ಚಹಾವನ್ನು ವ್ಯರ್ಥ ಮಾಡಲು ಬಯಸಲಾರರು. ಚಹಾದ ಮೇಲಿನ ಮೋಹ ಆ ರೀತಿ ಇರುತ್ತದೆ.

ಈ ನಡುವೆ ಸೋಷಿಯಲ್‌ ಮೀಡಿಯಾದ ಚರ್ಚೆಗಳು ಚಹಾ ಪ್ರಿಯರಿಗೆ ಆತಂಕ ತಂದಿವೆ.

ಮತ್ತೆ ಬಿಸಿ ಮಾಡಿದ ಟೀ ಕುಡಿಯುವುದರಿಂದ ಕ್ಯಾನ್ಸರ್‌ ಬರಬಹುದು ಎಂದು ಚರ್ಚಿಸಲಾಗುತ್ತಿದೆ.

ಚಹಾ ಪ್ರಿಯರಲ್ಲಿ ಒಂದು ಪ್ರಶ್ನೆ ಇರಬಹುದು. ಚಹಾ ಕುಡಿದರೆ ಕ್ಯಾನ್ಸರ್‌ ಬರುವ ಸುದ್ದಿ ನಿಜವೇ?

ದೀರ್ಘಕಾಲ ಶೇಖರಿಸಿಟ್ಟ ಚಹಾ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಾದ ಅತಿಸಾರ, ಮಲಬದ್ಧತೆ, ಅಸಿಡಿಟಿ ಖಂಡಿತಾ ಬರಬಹುದು.

ತಜ್ಞರ ಪ್ರಕಾರ, ಕ್ಯಾನ್ಸರ್‌ ಮುಖ್ಯವಾಗಿ ಜೀವಕೋಶಗಳ ವಿಭಜನೆಯಿಂದ ಉಂಟಾಗುತ್ತದೆ. ಮತ್ತೆ ಬಿಸಿ ಮಾಡಿದ ಚಹಾ ಕುಡಿಯುವುದರಿಂದ ಕ್ಯಾನ್ಸರ್‌ಬರುವ ಸಾಧ್ಯತೆ ಕಡಿಮೆ.

ಮತ್ತೆ ಬಿಸಿಮಾಡಿದ ಚಹಾ ಕುಡಿಯುವುದರಿಂದ ಕ್ಯಾನ್ಸರ್‌ ಉಂಟಾಗುತ್ತದೆ ಎನ್ನುವುದಕ್ಕೆ ಆಧಾರಗಳು ಇಲ್ಲ. ಅತಿಯಾದರೆ ಅಮೃತವೂ ವಿಷ ಎನ್ನುವುದನ್ನು ಮರೆಯುವಂತೆ ಇಲ್ಲ.

ಇದು ಲಭ್ಯವಿರುವ ಮಾಹಿತಿ ಆಧರಿಸಿದ ಬರಹ. ಸೂಕ್ತ ಸಲಹೆಯನ್ನು ತಜ್ಞ ವೈದ್ಯರಿಂದ ಪಡೆಯಿರಿ.

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS